HEALTH TIPS

ಆಂಧ್ರ ಅಬಕಾರಿಯಲ್ಲಿ ಕಂಪ್ಯೂಟರ್ ಕರಾಮತ್ತು: ಬೇಡಿಕೆ ಇರುವ ಮದ್ಯ ಖರೀದಿಗೆ ಒತ್ತು

        ಮರಾವತಿ: ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಇರುವ ಮದ್ಯ ಖರೀದಿಸುವ ಮೂಲಕ ಬೇಡಿಕೆ ಹಾಗೂ ಪೂರೈಕೆ ಸರಿದೂಗಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಆಧಾರಿತ ಮಾದರಿಯೊಂದನ್ನು ಆಂಧ್ರಪ್ರದೇಶದ ಅಬಕಾರಿ ಇಲಾಖೆ ಜಾರಿಗೆ ತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

         'ಬೇಡಿಕೆ ಹೆಚ್ಚು ಇರುವ ಬ್ರಾಂಡ್‌ನ ಮದ್ಯ ಖರೀದಿಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ಹೀಗೆ ಬೇಡಿಕೆ ಹೆಚ್ಚಿಸಿಕೊಳ್ಳಲು ಎಲ್ಲಾ ನೋಂದಾಯಿತ ಮದ್ಯ ತಯಾರಿಕಾ ಕಂಪನಿಗಳಿಗೆ ಸಮಾನ ಅವಕಾಶ ನೀಡುವ ಯೋಜನೆ ಇದಾಗಿದೆ' ಎಂದಿದ್ದಾರೆ.

            ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ಅಬಕಾರಿ ನೀತಿಯನ್ನು ರದ್ದುಪಡಿಸಿರುವ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರವು, ಹೊಸ ನೀತಿಯನ್ನು ಬುಧವಾರದಿಂದ ಜಾರಿಗೆ ತಂದಿದೆ.

          'ಮಾರುಕಟ್ಟೆ ಬೇಡಿಕೆ ಆಧಾರಿತ ವ್ಯವಸ್ಥೆಯನ್ನು ಈಗ ಜಾರಿಗೆ ತರಲಾಗಿದೆ. ಇದನ್ನು ಕಂಪ್ಯೂಟರ್‌ನ ಅಪ್ಲಿಕೇಷನ್‌ ನಿರ್ಧರಿಸುತ್ತದೆ. ಆರಂಭದಲ್ಲಿ ಎಲ್ಲಾ ಬ್ರಾಂಡ್‌ಗಳಿಗೂ 10 ಸಾವಿರ ಕೇಸ್‌ ಅನ್ನು ಮಾರುಕಟ್ಟೆಗೆ ಬಿಡುವ ಸಮಾನ ಅವಕಾಶ ನೀಡಲಾಗುವುದು. ಅದಾದ ನಂತರ, ಯಾವ ಬ್ರಾಂಡ್‌ಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೋ, ಅದನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಸ್ತಾನು ಮಾಡುವ ಅವಕಾಶ ನೀಡಲಾಗುತ್ತದೆ. ಇದಕ್ಕೆ ಮೂರು ತಿಂಗಳ ವಹಿವಾಟನ್ನು ಗಮದಲ್ಲಿಟ್ಟುಕೊಳ್ಳಲಾಗುತ್ತದೆ. ಹೀಗೆ ಬೇಡಿಕೆ ಇರುವ ಬ್ರಾಂಡ್‌ನ ಮದ್ಯವನ್ನು ಶೇ 150ರಷ್ಟು ಖರೀದಿ ಮಾಡಲು ಅವಕಾಶ ನೀಡಲು ಈ ಹೊಸ ನೀತಿಯಲ್ಲಿ ಅವಕಾಶವಿದೆ' ಎಂದು ವಿವರಿಸಿದ್ದಾರೆ.

          'ನೂತನ ಅಬಕಾರಿ ನೀತಿಯಡಿ ದೇಶೀಯ ಹಾಗೂ ವಿದೇಶಗಳ ಎಲ್ಲಾ ಬ್ರಾಂಡ್‌ನ ಮದ್ಯದ ಬ್ರಾಂಡ್‌ಗಳು ರಾಜ್ಯ ಪ್ರವೇಶಿಸುವ ಉತ್ಸುಕತೆ ಹೊಂದಿವೆ. ಆದರೆ ವೈಎಸ್‌ಆರ್‌ಸಿಪಿ ಸರ್ಕಾರದ ಸಮಯದಲ್ಲಿ ಕೆಲ ಬ್ರಾಂಡ್‌ಗಳಿಗೆ ಸಮಾನ ಅವಕಾಶ ಇರಲಿಲ್ಲ. ತಮ್ಮಿಷ್ಟದ ಮದ್ಯ ಖರೀದಿಯ ಬದಲು, ಲಭ್ಯವಿರುವ ಬ್ರಾಂಡ್‌ನ ಮದ್ಯ ಖರೀದಿಸುವ ಅನಿವಾರ್ಯತೆ ಇತ್ತು. ಅದನ್ನು ಈಗ ಪರಿಹರಿಸಲಾಗಿದೆ' ಎಂದು ಅಬಕಾರಿ ಸಚಿವ ಕೆ. ರವೀಂದ್ರ ಹೇಳಿದ್ದಾರೆ.

          'ನಮ್ಮ ಸರ್ಕಾರದ ಈ ನೂತನ ನೀತಿಯಡಿ ಕೇವಲ ₹99ಕ್ಕೆ 180 ಮಿ.ಲೀ. ಮದ್ಯವೂ ಲಭ್ಯವಿದೆ. ದುಬಾರಿ ಮದ್ಯವೂ ಸಿಗುತ್ತದೆ. ಆದರೆ ಗುಣಮಟ್ಟದ ಮದ್ಯ ಪೂರೈಕೆಗೆ ಆದ್ಯತೆ ನೀಡಲಾಗಿದೆ' ಎಂದಿದ್ದಾರೆ.

         'ಎನ್‌ಡಿಎ ಸರ್ಕಾರ ರಾಜ್ಯದಲ್ಲಿ ರಚನೆಯಾದ ನಂತರದಲ್ಲಿ ಆಂಧ್ರದ ಮದ್ಯದಂಗಡಿಯಲ್ಲಿ ಡಿಜಿಟಲ್‌ ಪಾವತಿ ಪ್ರಮಾಣ ಶೇ 9ರಷ್ಟು ಹೆಚ್ಚಳವಾಗಿದೆ. ಹೊಸ ಮದ್ಯದಂಗಡಿಗೆ ಸುಮಾರು 90 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ₹1,800 ಕೋಟಿ ಮೊತ್ತದ ಪರವಾನಗಿಯನ್ನು 3,396 ಅಂಗಡಿಗಳಿಗೆ ಅ. 14ರಂದು ಹಸ್ತಾಂತರಿಸಲಾಗಿದೆ. ಅರ್ಜಿ ಸಲ್ಲಿಸಲು 21 ವರ್ಷ ಮೇಲಿನ ಪ್ರತಿಯೊಬ್ಬರಿಗೂ ಅವಕಾಶ ನೀಡಲಾಗಿತ್ತು. ಇದಕ್ಕಾಗಿ ಮರುಪಾವತಿಸಲಾಗದ ₹2 ಲಕ್ಷ ಭದ್ರತಾ ಠೇವಣಿ ಇಡುವ ಷರತ್ತು ವಿಧಿಸಲಾಗಿತ್ತು' ಎಂದು ತಿಳಿಸಿದರು.

                ಆಂಧ್ರಪ್ರದೇಶ ಸರ್ಕಾರಕ್ಕೆ ಅಬಕಾರಿ ಪ್ರಮುಖ ಆದಾಯ ಮೂಲವಾಗಿದೆ. 2024-25ರಲ್ಲಿ ಈ ಉದ್ಯಮದಿಂದ ₹20 ಸಾವಿರ ಕೋಟಿ ಆದಾಯವನ್ನು ಸರ್ಕಾರ ನಿರೀಕ್ಷಿಸಿದೆ.

              ನೂತನ ಅಬಕಾರಿ ನೀತಿಗೆ ಮಾಜಿ ಸಿಎಂ, ವೈಎಸ್‌ಆರ್‌ಸಿಪಿ ನಾಯಕ ಜಗನ್ ಮೋಹನ ರೆಡ್ಡಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮದ್ಯ ಮಾಫಿಯಾ ಹಾಗೂ ತಮ್ಮ ಆಪ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದ್ದು, ಇದರ ವಿರುದ್ಧ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries