ಶ್ರೀನಗರ: ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಲು ಜಮ್ಮು-ಕಾಶ್ಮೀರದ ಯುವ ಜನತೆಯನ್ನು ನೇಮಕ ಮಾಡಿಕೊಳ್ಳುವುದು ಬಹಳ ಕಷ್ಟವಾಗಿರುವ ಕಾರಣ, ಪಾಕಿಸ್ತಾನದ ಐಎಸ್‌ಐ ಮತ್ತು ಇತರ ಉಗ್ರ ಸಂಘಟನೆಗಳು ತಮ್ಮ ತಂತ್ರಗಾರಿಕೆಯನ್ನು ಬದಲಿಸಿವೆ.
ಶ್ರೀನಗರ: ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಲು ಜಮ್ಮು-ಕಾಶ್ಮೀರದ ಯುವ ಜನತೆಯನ್ನು ನೇಮಕ ಮಾಡಿಕೊಳ್ಳುವುದು ಬಹಳ ಕಷ್ಟವಾಗಿರುವ ಕಾರಣ, ಪಾಕಿಸ್ತಾನದ ಐಎಸ್‌ಐ ಮತ್ತು ಇತರ ಉಗ್ರ ಸಂಘಟನೆಗಳು ತಮ್ಮ ತಂತ್ರಗಾರಿಕೆಯನ್ನು ಬದಲಿಸಿವೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಕಾರಣ, ಯುವ ಜನತೆಯ ನೇಮಕಕ್ಕೆ ಐಎಸ್‌ಐ ಮತ್ತು ಉಗ್ರ ಸಂಘಟನೆಗಳಿಗೆ ಕಷ್ಟವಾಗುತ್ತಿದೆ.
ತಮ್ಮ ಗುರುತು ಪತ್ತೆ ಆಗುವುದನ್ನು ತಡೆಯಲು ಈ ಸಂಘಟನೆಗಳು ನಕಲಿ ಪ್ರೊಫೈಲ್‌ಗಳು ಹಾಗೂ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ಸ್ (ವಿಪಿಎನ್) ಗಳನ್ನು ಬಳಕೆ ಮಾಡುತ್ತಿವೆ
ಪಾಕಿಸ್ತಾನದ ಐಎಸ್‌ಐ ಜೊತೆ ನಂಟು ಹೊಂದಿರುವ 'ಹ್ಯಾಂಡ್ಲರ್'ಗಳು, ಆನ್‌ಲೈನ್ ವೇದಿಕೆಗಳ ಮೂಲಕ ನೇಮಕವಾದ ಯುವ ಜನತೆಯಲ್ಲಿ ದ್ವೇಷ ಮನೋಭಾವ ಬೆಳೆಯುವಂತೆ ನೋಡಿಕೊಳ್ಳುವ ತಂತ್ರ ಬಳಸುತ್ತಾರೆ. ಇದು, ಮತ್ತಷ್ಟು ಯುವ ಜನತೆಯ ನೇಮಕಕ್ಕೆ ನೆರವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಈಜಿಪ್ಟ್ ಮೂಲದ ತೀವ್ರವಾದಿ ಸಯ್ಯಿದ್ ಕುತ್ಬ್ ರಚಿಸಿದ ಸಾಹಿತ್ಯವನ್ನು ಹೊಸದಾಗಿ ನೇಮಕಗೊಂಡವರಿಗೆ ಹೇಳಿಕೊಡಲಾಗುತ್ತಿದೆ. ಅಲ್ ಕೈದಾ ಸೇರಿದಂತೆ ಅನೇಕ ಉಗ್ರ ಸಂಘಟನೆಗಳು ಈತನ ಸಾಹಿತ್ಯದಿಂದ ಪ್ರಭಾವಿತವಾಗಿವೆ. ಹೀಗಾಗಿ, ಈ ಬೆಳವಣಿಗೆ ಕಳವಳಕಾರಿ' ಎಂದು ಹೇಳಿದ್ದಾರೆ.
ಪಾಶ್ಚಿಮಾತ್ಯ ಪ್ರಭಾವ ಮತ್ತು ಜಾತ್ಯತೀತ ಸರ್ಕಾರಗಳ ವಿರುದ್ಧ ಜಿಹಾದ್ ಬಳಕೆಗೆ ಪ್ರಚೋದಿಸಿದ್ದಕ್ಕಾಗಿ ಕುತ್ಬ್‌ಗೆ 1966ರಲ್ಲಿ ಗಲ್ಲಿಗೇರಿಸಲಾಗಿದೆ.