ಕಾಸರಗೋಡು: ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸಯನ್ಸ್ ವಿಭಾಗದ ಆಶ್ರಯದಲ್ಲಿ ಐ.ಸಿ.ಟಿ, ಐ.ಸಿ.ಪೋಸ್, ಐ.ಇ.ಡಿ.ಸಿ, ಐ.ಇ.ಇ.ಇ. ಗಳೊಂದಿಗೆ ಸಹಕರಿಸಿ ಸೈಬರ್ ಸುರಕ್ಷೆ ಹಾಗು ಸೈಬರ್ ಫಾರೆನಿಕ್ಸ್ ಎಂಬ ವಿಷಯದಲ್ಲಿ ಎರಡು ದಿನಗಳ ತರಬೇತಿ ನಡೆಯಿತು.
ವೈಸ್ ಚಾನ್ಸಲರ್ ಇನ್‍ಚಾರ್ಜ್ ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಉದ್ಘಾಟಿಸಿದರು. ಕಲ್ಲಿಕೋಟೆ ಎನ್‍ಐಟಿ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಹಿರನ್ ವಿ.ನಾಥ್ ತರಗತಿ ನಡೆಸಿದರು. ಡಾ.ಕೆ.ದೀಪ್ತಿ, ಡಾ.ಟಿ.ಎಂ.ತಸ್ಲೀಮಾ, ಡಾ.ವಿ.ಕುಮಾರ್, ಡಾ.ಎಸ್.ಮನೋಹರ್ ಮಾತನಾಡಿದರು.
ಪ್ರೊ..ರಾಜೇಶ್ ಸ್ವಾಗತಿಸಿ, ಪ್ರೊ.ಜೆ.ಎಸ್.ಜಯಸುಧಾ ವಂದಿಸಿದರು. ವಿವಿಧ ವಿಶ್ವವಿದ್ಯಾಲಯಗಳ ಹಾಗು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.