HEALTH TIPS

ಗಿನ್ನಿಸ್​ ದಾಖಲೆಗೆ​ ಸೇರಿತು ರೇಡಿಯೋ ಮ್ಯೂಸಿಯಂ! ಇಲ್ಲಿರುವ ಒಟ್ಟು ಟೇಪ್ ​ರೆಕಾರ್ಡರ್ ಸಂಖ್ಯೆ​ ಎಷ್ಟು ಗೊತ್ತೇ?

              ತ್ತರಪ್ರದೇಶ: 90ರ ದಶಕದಲ್ಲಿ ಅತೀ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದ ಟೇಪ್​ ರೆಕಾರ್ಡ್​ಗಳ ಅಸ್ತಿತ್ವ ಇಂದು ನಶಿಸಿಹೋಗಿವೆ. ರೇಡಿಯೋ ಬಳಸುವವರ ಸಂಖ್ಯೆ ಕ್ಷಿಣಿಸಿದೆ ಎನ್ನುವುದಕ್ಕಿಂತ ಬಳಕೆಯಲ್ಲೇ ಇಲ್ಲ ಎಂದೇ ಹೇಳಬಹುದು. ಅಲ್ಲಲ್ಲಿ ಕೆಲವೊಬ್ಬರು ಮಾತ್ರ ಹಳೆಯ ವಸ್ತುಗಳ ಮೇಲಿನ ಪ್ರೀತಿ, ಕಾಳಜಿಯಿಂದ ಎಷ್ಟು ವರ್ಷ ಹಿಂದಿನದ್ದಾದರೂ ಪರವಾಗಿಲ್ಲ ಎಂದು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

         ಕೆಲವರ ಬಳಿಯಿರುವ ಟೇಪ್​ ರೆಕಾರ್ಡ್​ಗಳು ಕೆಲಸ ಮಾಡದೆ ಕಟ್ಟುಹೋಗಿದ್ದೇ ಆದರೂ ಅದನ್ನು ಮೂಲೆಯಲ್ಲಿ ಎಸೆಯದೆ, ಬಹಳ ಜೋಪಾನವಾಗಿ ಸಂಗ್ರಹಿಸಿರುವವರು ಇಂದಿಗೂ ಇದ್ದಾರೆ. ಆ ಸಾಲಿನಲ್ಲಿ ಇಲ್ಲೊಬ್ಬರು ವ್ಯಕ್ತಿ (Radio Man) ಬಹಳ ವಿಶೇಷ ಎಂದೇ ಕರೆಯಬಹುದು. ಏಕೆಂದರೆ, ಇವರು ಕಾಪಾಡಿಕೊಂಡು ಬಂದಿರುವುದು ಒಂದಲ್ಲ, ಎರಡಲ್ಲ, ಬರೋಬ್ಬರಿ 1,400 ರೇಡಿಯೋಗಳು (Radio). ಇದು ಎಲ್ಲಿದೆ, ಇವರು ಮಾಡಿದ ದಾಖಲೆ ಏನು ಎಂಬ ಮಾಹಿತಿ ತಿಳಿದರೆ ಖಂಡಿತ ನಿಮ್ಮ ಹುಬ್ಬೇರುತ್ತದೆ.

           ಅಂದು ಟಿವಿ ಇಲ್ಲದ ಕಾಲದಲ್ಲಿ ದೇಶ-ವಿದೇಶ ಸೇರಿದಂತೆ ಜಾನಪದ ಗೀತೆಗಳು, ರಸಪ್ರಶ್ನೆ ಕಾರ್ಯಕ್ರಮಗಳನ್ನು ಜನರು ಇದೇ ಟೇಪ್ ರೆಕಾರ್ಡ್​ಗಳ ಮುಖೇನ ಆಲಿಸಿ, ಆನಂದಿಸುತ್ತಿದ್ದರು. ಅದಕ್ಕೋ ಏನೋ ಅಂದಿನ ಕಾಲದವರ ಕಣ್ಣುಗಳು ಇಂದಿಗೂ ಯುವಕರ ಕಣ್ಣಿನಂತೆ ಚುರುಕಾಗಿರುತ್ತದೆ. ಕನ್ನಡಕ ಬಳಸದೆ ಸುದ್ದಿಪತ್ರಿಕೆಗಳನ್ನು ಓದುವ ಸಾಮರ್ಥ್ಯ ಉಳಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅತೀ ಹೆಚ್ಚಾಗಿ ರೇಡಿಯೋ ಬಳಸುತ್ತಿದ್ದ ಕಾಲ ಎಂದರೆ 1900ರಿಂದ 1990 ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ನಾನಾ ಬಗೆಯ ರೇಡಿಯೋಗಳು ಮಾರುಕಟ್ಟೆ ಪ್ರವೇಶಿಸಿದ್ದವು. ಒಬ್ಬೊಬ್ಬರ ಹತ್ತಿರ ಒಂದೊಂದು ಬ್ರ್ಯಾಂಡ್​ನ ಟೇಪ್​ ರೆಕಾರ್ಡ್​ಗಳು ಇದ್ದವು. ಆದ್ರೆ, ಇಡೀ ಜಗತ್ತಿನಲ್ಲಿ ಯಾವ್ಯಾವ ರೀತಿಯ ರೇಡಿಯೋಗಳು ಮಾರುಕಟ್ಟೆಯಲ್ಲಿತ್ತೋ ಅದೆಲ್ಲವೂ ಇಂದು ಉತ್ತರ ಪ್ರದೇಶದ ರಾಮ್​ ಸಿಂಗ್ ಬೌದ್​ ಎಂಬುವವರ ಬಳಿಯಿದೆ.

           ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಗಜ್ರೌಲಾ ನಿವಾಸಿಯಾದ ರಾಮ್​ ಸಿಂಗ್ ಬೌದ್​ ಅವರ ಬಳಿ 1,400 ಬಗೆಯ ರೇಡಿಯೋಗಳ ಸಂಗ್ರಹವಿದೆ. ಇವರ ಮನೆಯನ್ನು ಅಲ್ಲಿನ ಸ್ಥಳೀಯರು 'ರೇಡಿಯೋ ಮ್ಯೂಸಿಯಂ' ಎಂದು ಕರೆಯುತ್ತಾರೆ. ಇದೇ ವಿಷಯಕ್ಕೆ ಅವರಿಗೆ ಹೊಸ ಪಟ್ಟ ದೊರಕಿದ್ದು, ತಮ್ಮಲ್ಲಿರುವ 1,257 (ಆಯ್ಕೆ ಮಾಡಲಾದ) ರೇಡಿಯೋಗಳಿಂದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಬೌದ್ ಅವರು 1920ರಿಂದ 2010ರವರೆಗಿನ ಎಲ್ಲಾ ಬಗೆಯ ರೇಡಿಯೋಗಳನ್ನು ಸಂಗ್ರಹಿಸಿಟ್ಟಿದ್ದಾರೆ. ದೆಹಲಿ ಮತ್ತು ಮೀರತ್ ಸೇರಿದಂತೆ ದೇಶದ ವಿವಿಧ ಮಾರುಕಟ್ಟೆಗಳಿಂದ ಇದನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

             ಬೌದ್ ಸಂಗ್ರಹಿಸಿರುವುದು ಒಟ್ಟು 1,400 ರೇಡಿಯೋಗಳು. ಆದ್ರೆ, ಗಿನ್ನಿಸ್​ ವಿಶ್ವ ದಾಖಲೆ ಬುಕ್ ಆಫ್​ ರೆಕಾರ್ಡ್ಸ್ ಪರಿಶೀಲನೆ ವೇಳೆ ಎಲ್ಲವೂ ವಿಭಿನ್ನವಾಗಿರಬೇಕು ಮತ್ತು 1,400 ಕೂಡ ಬೇರೆಯದ್ದೇ ಆಗಿರಬೇಕು ಎಂಬ ನಿಯಮವನ್ನು ಸ್ಪಷ್ಟಪಡಿಸಲಾಯಿತು. ಇದರ ಅನ್ವಯ 1,257 ಟೇಪ್​ ರೆಕಾರ್ಡ್​ಗಳನ್ನು ಮಾತ್ರ ಆಯ್ಕೆ ಮಾಡಿಕೊಂಡ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್​, ಈ ಹಿಂದೆ 625 ರೇಡಿಯೊಗಳ ಸಂಗ್ರಹವನ್ನು ಹೊಂದಿದ್ದ ಎಂ. ಪ್ರಕಾಶ್ ಅವರ ದಾಖಲೆಯನ್ನು ಇಂದು ಬೌದ್​ ಮುರಿದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ. ಈ ವಿಷಯಕ್ಕೆ ಬೌದ್​ ಧನ್ಯವಾದ ಅರ್ಪಿಸಿದ್ದಾರೆ.

         2023ರ ನವೆಂಬರ್​ನಲ್ಲಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಬೌದ್ ಅವರ ರೇಡಿಯೋ ಸಂಗ್ರಹದ ಬಗ್ಗೆ ಮೆಚ್ಚಿ ಮಾತನಾಡಿದ್ದರು. ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಮನ್ ಕಿ ಬಾತ್ ಕಾರ್ಯಕ್ರಮ ಪ್ರತಿ ಮನೆಯಲ್ಲೂ ರೇಡಿಯೊವನ್ನು ಹೆಚ್ಚು ಜನಪ್ರಿಯಗೊಳಿಸಿದೆ ಎಂದು ಪ್ರಧಾನಿ ತಿಳಿಸಿದ್ದರು. ಇದೇ ವೇಳೆ ಬೌದ್​ ರೇಡಿಯೋ ಒಲವಿನ ಕುರಿತು ಮಾತನಾಡಿದ್ದ ಪಿಎಂ, ರಾಮ್ ಸಿಂಗ್ ಜೀ ಹಲವು ದಶಕಗಳಿಂದ ರೇಡಿಯೋಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಗುರುತಿಸಿದ್ದರು. ಅಂದಿನಿಂದ ನಮ್ಮ ರೇಡಿಯೊ ಮ್ಯೂಸಿಯಂ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಯಿತು ಎಂದು ಬೌದ್​ ಹೇಳಿದ್ದಾರೆ.

ವೇರ್‌ಹೌಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಮೇಲ್ವಿಚಾರಕ ಹುದ್ದೆಯಿಂದ ನಿವೃತ್ತಿ ಪಡೆದ ಬೌದ್​ರನ್ನು ಭಾರತದಲ್ಲಿ 'ರೇಡಿಯೋ ಮ್ಯಾನ್ ಆಫ್ ಇಂಡಿಯಾ' ಎಂದು ಕರೆಯಲಾಗುತ್ತದೆ. ವಿಶ್ವದ ಏಕೈಕ ರೇಡಿಯೋ ಮ್ಯೂಸಿಯಂ ಉತ್ತರ ಪ್ರದೇಶದಲ್ಲಿದ್ದು, ಅದು ಬೌದ್​ ಅವರ ನಿವಾಸ ಎಂಬುದೇ ವಿಶೇಷ..


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries