ಕಾಸರಗೋಡು: ಬ್ಯಾಂಕಿನಲ್ಲಿ ನಕಲಿ ಚಿನ್ನಾಭರಣ ಅಡವಿರಿಸ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಞಂಗಾಡು ನೀಲಂಕರ ನಿವಾಸಿ ಅಶ್ರಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗದಲ್ಲಿ ಚಟುವಟಿಕೆ ನಡೆಸುತ್ತಿರುವ ಹೊಸದುರ್ಗ ಸೇವಾ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ 2024 ಏ. 4ರಂದು 25.470ಗ್ರಾಂ ಚಿನ್ನಾಭರಣ ಇರಿಸಿ 1.17ಲಕ್ಷ ರೂ. ಹಣ ಪಡೆದಿದ್ದನು. ಅನಂತರ ಬ್ಯಾಂಕಿನಲ್ಲಿ ನಡೆಸಿದ ತಪಾಸಣೆಯಲ್ಲಿ ಅಶ್ರಫ್ ಇರಿಸಿರುವ ಚಿನ್ನ ನಕಲಿ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಬ್ಯಾಂಕಿನ ಸಹಾಯಕ ಕಾರ್ಯದರ್ಶಿ ಪ್ರದೀಪ್ ಕೆ ದೂರು ನೀಡಿದ್ದರು.