ದುಬೈ: ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಸುಹೇಲ್ ಹುಸೇನ್ ಹುಸೇನಿ ಹತನಾಗಿದ್ದಾನೆ.
ಲೆಬನಾನ್ ರಾಜಧಾನಿ ಬೈರೂತ್ ಪ್ರದೇಶದಲ್ಲಿ ದಾಳಿ ನಡೆಸಿದ್ದು, ಹಿಜ್ಬುಲ್ಲಾ ಪ್ರಧಾನ ಕಚೇರಿಯ ಕಮಾಂಡರ್ ಸುಹೇಲ್ ಹುಸೇನ್ ಹುಸೇನಿಯನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆಯು ಮಸೀದಿ ಮತ್ತು ಶಾಲಾ ಕಟ್ಟಡವನ್ನು ಗುರಿಯಾಗಿಸಿ ನಡೆಸಿದ ಪ್ರತ್ಯೇಕ ದಾಳಿಯಲ್ಲಿ 23 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇಸ್ರೇಲ್ ಸೇನೆ, ಹಮಾಸ್ ಗುರಿಯಾಗಿಸಿ ಗಾಜಾಪಟ್ಟಿಯಲ್ಲಿ ದಾಳಿ ಮುಂದುವರಿಸಿದೆ. ಜೊತೆಗೆ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ವಿರುದ್ಧವೂ ದಾಳಿ ತೀವ್ರಗೊಳಿಸಿದೆ.