ಬ್ರಿಟನ್ : ಬೋಳು ತಲೆಯವರಿಗೆ ಮೊಟ್ಟೆ, ಬಾಲ್ಡ್ ಅಂತೆಲ್ಲಾ ರೇಗಿಸ್ತಿರ್ತಾರೆ. ಆದರೆ ಇನ್ಮುಂದೆ ಹೀಗೆ ರೇಗಿಸುವಾಗ ಕೊಂಚ ಎಚ್ಚರಿಕೆಯಿಂದ ಇರಿ. ಯಾಕೆಂದ್ರೆ ಹೀಗೆ ಹೇಳುವುದು ಲೈಂಗಿಕ ಕಿರುಕುಳ ಎಂದು ಕೋರ್ಟ್ ( High Court ) ಇತ್ತೀಚೆಗೆ ನಡೆದ ಘಟನೆಯೊಂದಕ್ಕೆ ತೀರ್ಪು ನೀಡಿದೆ.

ಬ್ರಿಟನ್‌ನಲ್ಲಿ ಬಾಸ್ ಒಬ್ಬ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಉದ್ಯೋಗಿಯ ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಿದ್ದು, ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದರಿಂದ ಬೇಸರಗೊಂಡ ಉದ್ಯೋಗಿ ಕೋರ್ಟ್ ಮೆಟ್ಟಿಲೇರಿದ್ದಾನೆ.
2021 ರಲ್ಲಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಆ ವ್ಯಕ್ತಿಯ ತೀರ್ಪನ್ನು ನೀಡಿದ್ದು, ಬೋಳು ತಲೆಯ ಬಗ್ಗೆ ತಮಾಷೆ ಮಾಡಿರುವ ಬಾಸ್‌ಗೆ ನ್ಯಾಯಾಲಯ ಕ್ಲಾಸ್ ತೆಗೆದುಕೊಂಡಿದೆ.
ಬ್ರಿಟನ್ ಹೈ ಕೋರ್ಟ್ ಹೇಳಿದ್ದೇನು?:
ಪುರುಷರ ಬೋಳು ತಲೆಯ ಬಗ್ಗೆ ಗೇಲಿ ಮಾಡುವುದು ಮಹಿಳೆಯರ ಸ್ತನದ ಬಗ್ಗೆ ತಮಾಷೆ ಮಾಡುವುದಕ್ಕೆ ಸಮಾನವಾದ್ದದ್ದು, ಆದ್ದರಿಂದ ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಬಾರದು, ಇದು ಕೂಡಾ ಲೈಗಿಂಕ ದೌರ್ಜನ್ಯ ಎಂದು ಬ್ರಿಟನ್ ಹೈ ಕೋರ್ಟ್ ಆದೇಶ ಹೊರಡಿಸಿದೆ.