ಕೊಲಂಬೊ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶುಕ್ರವಾರ ಇಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರನ್ನು ಭೇಟಿಯಾಗಿದ್ದು, ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿ ಮತ್ತು ಆರ್ಥಿಕ ಸಹಕಾರ ಕುರಿತು ಚರ್ಚಿಸಿದರು.

'ದ್ವೀಪರಾಷ್ಟ್ರದ ಆರ್ಥಿಕ ಬಲವರ್ಧನೆಗೆ ಭಾರತವು ಎಲ್ಲ ಅಗತ್ಯ ಸಹಕಾರವನ್ನು ಮುಂದುವರಿಸಲಿದೆ' ಎಂದು ಜೈಶಂಕರ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ದಿಸ್ಸಾನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಭೇಟಿ ನೀಡಿದ ವಿದೇಶದ ಪ್ರಥಮ ಸಚಿವ ಜೈಶಂಕರ್ ಆಗಿದ್ದಾರೆ. ಜೈಶಂಕರ್ ಅವರು ವಿದೇಶಾಂಗ ಸಚಿವ ವಿಜಿತಾ ಹೆರತ್ ಅವರನ್ನೂ ಭೇಟಿಯಾಗಿದ್ದರು.
ದಿಸ್ಸಾನಾಯಕೆ ಅವರು ವಿಪಕ್ಷದಲ್ಲಿದ್ದಾಗ, ಭಾರತ ಕೈಗೊಂಡಿರುವ ಕೆಲ ಯೋಜನೆಗಳಿಗೆ, ಮುಖ್ಯವಾಗಿ ಅದಾನಿ ಸಮೂಹ ಕಾರ್ಯಗತಗೊಳಿಸುತ್ತಿರುವ ಸುಸ್ಥಿರಾಭಿವೃದ್ಧಿ ಇಂಧನ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. 'ಈ ಯೋಜನೆಯು ಶ್ರೀಲಂಕಾ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅಧಿಕಾರಕ್ಕೆ ಬಂದರೆ ರದ್ದುಪಡಿಸಲಾಗುವುದು' ಎಂದು ಹೇಳಿದ್ದರು.