ಕಾಸರಗೋಡು : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ,ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ,ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗ ಪ್ರಾಯೋಜಕತ್ವದಲ್ಲಿ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ನ. 10ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಜರುಗಲಿರುವುದು.
ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುಂಚಿತವಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕೇರಳ -ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ನೂರಾರು ವಿದ್ಯಾರ್ಥಿಗಳು, ಹೆತ್ತವರು ಪೆÇೀಷಕರು ಅಧ್ಯಾಪಕರು, ಜನ ಪ್ರತಿನಿಧಿಗಳು ಮತ್ತು ಕನ್ನಡಾಭಿಮಾನಿಗಳನ್ನೊಳಗೊಂಡ ಸಾಂಸ್ಕøತಿಕ ಮೆರವಣಿಗೆ ಕಾಸರಗೋಡು ಮಧೂರು ರಸ್ತೆಯ ಮೀಪುಗುರಿ ಎಲ್.ಪಿ.ಶಾಲಾ ವಠಾರದ ಜಂಕ್ಷನ್‍ನಿಂದ ಕನ್ನಡ ಗ್ರಾಮದ ವರೆಗೆ ನಡೆಯಲಿರುವುದು.
ಕರ್ನಾಟಕ -ಕೇರಳ ರಾಜ್ಯದ ಸಚಿವರು ಲೋಕಸಭಾ ಸದಸ್ಯರು ಶಾಸಕರು ಜನ ಪ್ರತಿನಿಧಿಗಳು ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.