ಕಣ್ಣೂರು: ಪಿಪಿ ದಿವ್ಯಾ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಮಹಿಳಾ ಮೋರ್ಚಾ ಕಾರ್ಯಕರ್ತರು ಕಣ್ಣೂರು ಎಸ್ಪಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಠಿಔಲೀಸರು ಪ್ರತಿಭಟನಾಕಾರರನ್ನು ಥಳಿಸಿದರು ಮತ್ತು ನಂತರ ಬಲವಂತವಾಗಿ ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಎಡಿಎಂ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು, ಪಿಪಿ ದಿವ್ಯಾ ಅವರನ್ನು ಬಂಧಿಸಬೇಕು ಹಾಗೂ ಜಿಲ್ಲಾಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಮೆರವಣಿಗೆ ಎಸ್ಪಿ ಕಚೇರಿ ತಲುಪಿದಾಗ ಬ್ಯಾರಿಕೇಡ್ ಹಾಕಿ ತಡೆದರು. ನಂತರ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ರಘುನಾಥ್ ಪಾದಯಾತ್ರೆ ಉದ್ಘಾಟಿಸಿದರು.
ಪ್ರತಿಭಟನೆಯ ಅಂಗವಾಗಿ ರಸ್ತೆ ತಡೆ ನಡೆಸಿದ ಕಾರ್ಯಕರ್ತರನ್ನು ಥಳಿಸಲಾಯಿತು. ಕಾರ್ಯಕರ್ತರ ಮೇಲೆ ಪೋಲೀಸರ ಕ್ರಮದ ವಿರುದ್ಧ ಸುದೀರ್ಘ ಪ್ರತಿಭಟನೆ ನಡೆಯಿತು. ಪೋಲೀಸರು ಹಿಂಪಡೆದ ನಂತರ ಪ್ರತಿಭಟನೆ ಕೊನೆಗೊಂಡಿತು.
ಇದೇ ವೇಳೆ ಪಿ.ಪಿ.ದಿವ್ಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದ ವಾದಗಳು ನ್ಯಾಯಾಲಯದಲ್ಲಿ ನಡೆದವು. ನವೀನ್ ಬಾಬು ಸಾವಿನ ನಂತರ ಮುಖ್ಯಮಂತ್ರಿಗೆ ದೂರು ನೀಡಲು ಪ್ರಶಾಂತ್ ಪತ್ರ ಸಿದ್ಧಪಡಿಸಿದ್ದರು ಎಂದು ನವೀನ್ ಕುಟುಂಬದ ಪರ ವಕೀಲರು ವಾದಿಸಿದರು.