ಕಾಸರಗೋಡು: ಕಾಸರಗೋಡಿನ ಬಿ.ಇ.ಎಂ ಪ್ರೌಢಶಾಲೆಯಲ್ಲಿ ನಿನ್ನೆ ಗಾಂಧಿ ಜಯಂತಿ ಆಚರಣೆ ನಡೆಯಿತು.
ಶಾಲಾ ಎನ್.ಸಿ.ಸಿ ನಿರ್ವಾಹಕ ಮುರಳಿ ಮಾಧವ ಭಟ್, ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ಡಾ. ಕೆ.ಯು ವೆಂಕಟರಮಣ ಹೊಳ್ಳ ,ಶಿಕ್ಷಕಿರಾದ ಶ್ರೀಮತಿ ರಕ್ಷಿತಾ ಹಾಗೂ ಅಶ್ವಿತಾ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಪುμÁ್ಪರ್ಚನೆಗೈದರು. ಹಾಗೂ .ಕೆ.ಯು. ವೆಂಕಟರಮಣ ಹೊಳ್ಳ ಅವರು ಮಕ್ಕಳಿಗೆ ಗಾಂಧಿ ಜಯಂತಿಯ ಮಹತ್ವವನ್ನು ತಿಳಿಸಿದರು. ಶಾಲಾ ವಠಾರವನ್ನು ಶುಚಿಗೊಳಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.