HEALTH TIPS

ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ, ಜಟಿಲವಾಗಿದೆ: ಕಾಂಗ್ರೆಸ್

         ವದೆಹಲಿ: ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ ಹಾಗೂ ಜಟಿಲ ಸ್ಥಿತಿಯಲ್ಲಿದೆ ಎಂದಿರುವ ಕಾಂಗ್ರೆಸ್‌, ಬದಲಾಗದ ವೇತನ, ಹಣದುಬ್ಬರ ಮತ್ತು ಅಸಮಾನತೆಯು ಬಳಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ ಎಂದು ಹೇಳಿದೆ.

          ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌, ಈಗ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದಿನ ದಿನಗಳಲ್ಲಿ ದೇಶದ ಬೆಳವಣಿಗೆ ಉಸಿರುಗಟ್ಟಲಿದೆ ಎಂದು ಎಚ್ಚರಿಸಿದ್ದಾರೆ.


               ಕಳೆದ ಮೂರು ದಶಕದ ದೇಶದ ಬೆಳವಣಿಗೆ ಹಾದಿಯಲ್ಲಿ, ಬಳಕೆಯ ಸಾಮರ್ಥ್ಯ ವೃದ್ಧಿಯು ಮುಖ್ಯ ವಿಚಾರವಾಗಿದೆ. ಅದು ಕೋಟ್ಯಂತರ ಕುಟುಂಬಗಳನ್ನು ಬಡತನದಿಂದ ಹೊರತಂದು ಮಧ್ಯಮವರ್ಗಕ್ಕೆ ನಿಲ್ಲಿಸಿದೆ. ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಸಾಮರ್ಥ್ಯ ಒದಗಿಸಿದೆ. ಅದು ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿರುವುದರ ಸಂಕೇತವಾಗಿದ್ದು, ಅದರ ಪ್ರಯೋಜನವು ಎಲ್ಲರಿಗೂ ಹಂಚಿಕೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಪ್ರತಿಪಾದಿಸಿದ್ದಾರೆ.

                  ಕಳೆದ 10 ವರ್ಷಗಳಲ್ಲಿ ದೇಶದ ಬಳಕೆಯ ಸಾಮರ್ಥ್ಯವು ಹಿಮ್ಮುಖವಾಗಿದೆ. ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವಾಗಿ ಬದಲಾಗಿದೆ. ವೇತನ ನಿಶ್ಚಲತೆ, ಅತಿಯಾದ ಹಣದುಬ್ಬರ ಮತ್ತು ಅಸಮಾನತೆಯೇ ಇದಕ್ಕೆ ಕಾರಣ ಎಂದು ರಮೇಶ್‌ ಹೇಳಿದ್ದಾರೆ.

        ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 'ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ (ಎಎಸ್‌ಐ) 2022-2023' ವರದಿ ಸೇರಿದಂತೆ ಹಲವು ಪೂರಕ ಅಂಕಿ-ಅಂಶಗಳನ್ನು ಹಂಚಿಕೊಂಡಿರುವ ಅವರು, ಈಗಿನ ಕೊಳ್ಳುವ ಸಾಮರ್ಥ್ಯವು 10 ವರ್ಷಗಳ ಹಿಂದಿನ ಮಟ್ಟಕ್ಕಿಂತಲೂ ಕುಸಿದಿರುವುದು ಸ್ಪಷ್ಟವಾಗಿದೆ ಎಂದು ಒತ್ತಿ ಹೇಳಿದ್ದಾರೆ.

'          ಬದಲಾಗದ ವೇತನವು ಕಾರ್ಮಿಕರ ಉತ್ಪಾದಕತೆಯನ್ನು ಕುಗ್ಗಿಸಲಿರುವುದು ಆತಂಕಕಾರಿಯಾಗಿದೆ. ಕಾರ್ಮಿಕರ ಉತ್ಪಾದಕತೆ ಕುಸಿತ ಹಾಗೂ ನೈಜ ವೇತನದಲ್ಲಿನ ನಿಶ್ಚಲತೆಯಿಂದಾಗಿ ಕುಟುಂಬವು ಬಳಕೆಗಾಗಿ ಮೀಸಲಿಡುವ ಹೆಚ್ಚುವರಿ ಆದಾಯದ ಪ್ರಮಾಣವೂ ಕುಸಿಯಲಿದೆ' ಎಂದು ಕಾಂಗ್ರೆಸ್‌ ನಾಯಕ ಪ್ರತಿಪಾದಿಸಿದ್ದಾರೆ.

            ಸಿಮೆಂಟ್‌, ರಾಸಾಯನಿಕ, ಪೆಟ್ರೋಲ್‌, ನಿರ್ಮಾಣ ಸೇರಿದಂತೆ ಸುಮಾರು 40 ವಲಯಗಳಲ್ಲಿ ಏಕಸ್ವಾಮ್ಯ ಸಾಧಿಸುತ್ತಿರುವ ಅದಾನಿ ಗ್ರೂಪ್‌ನಂತಹ ಐದು ವಾಣಿಜ್ಯ ಸಮೂಹಗಳು ಕಳೆದ ಹತ್ತು ವರ್ಷಗಳಲ್ಲಿ ಹೊರಹೊಮ್ಮಿವೆ ಎಂದು ಆರ್‌ಬಿಐನ ಮಾಜಿ ಉಪ ಗವರ್ನರ್‌ ಡಾ.ವಿರಳ್‌ ಆಚಾರ್ಯ ಅವರು ಉಲ್ಲೇಖಿಸಿರುವುದನ್ನು ಪ್ರಸ್ತಾಪಿಸಿ, ಹಣದುಬ್ಬರಕ್ಕೆ ಸಂಬಂಧಿಸಿದಂತೆ ವಿವರಿಸಿದ್ದಾರೆ.

2015ರಲ್ಲಿ ₹ 100ರ ವಸ್ತುವನ್ನು ಕೊಳ್ಳುವ ಸಾಮಾನ್ಯ ವ್ಯಕ್ತಿಯು, ಆ ವಸ್ತುವಿನ ಮಾಲೀಕನಿಗೆ ಶೇ 18ರಷ್ಟನ್ನು ಪಾವತಿಸಬೇಕಾಗಿತ್ತು. ಆದರೆ, ಇಂದು ಅದೇ ವಸ್ತುವಿನ ಮಾಲೀಕನಿಗೆ ಶೇ 36ರಷ್ಟು ನೀಡಬೇಕಾದ ಪರಿಸ್ಥಿತಿ ಇದೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries