ಕುಂಬಳೆ: ಕಾಸರಗೋಡನ್ನು ಅಚ್ಚರಿಗೊಳಿಸಿದ ಅತ್ಯಂತ ದೊಡ್ಡ ಮಟ್ಟದಲ್ಲಿ ಉದ್ಯೋಗ ಭರವಸೆ ನೀಡಿ ಹಲವಾರು ಉದ್ಯೋಗಾರ್ತಿಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ವಂಚನೆ ನಡೆಸಿರುವ ಕಮ್ಯುನಿಸ್ಟ್ ಪಕ್ಷದ ನೇತಾರೆ ಹಾಗೂ ಬಾಡೂರು ಅನುದಾನಿಕ ಶಾಲೆಯ ಅಧ್ಯಾಪಿಕೆ ಸಚಿತ ಬಿ. ರೈ ಕಮ್ಯುನಿಸ್ಟ್ ಪಕ್ಷದ ಆಡಳಿತದ ಆಸರೆಯಲ್ಲಿ ನಡೆಸಿರುವ ಎಲ್ಲಾ ಅವ್ಯವಹಾರ ವಂಚನೆಗಳನ್ನು ಸೂಕ್ತವಾದ ತನಿಖೆಗೆ ಒಳಪಡಿಸಬೇಕು. ಜನಸಾಮಾನ್ಯರ ಮುಂದೆ ನಡೆದ ಭ್ರಷ್ಟಾಚಾರದ ತೀವ್ರತೆಯನ್ನು ತೆರೆದಿಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಬಡಪಾಯಿ ಉದ್ಯೋಗಾರ್ಥಿಗಳು ನೀಡಿದ ಹಣವನ್ನು ಹಿಂತಿರುಗಿಸುವ ಕೆಲಸವನ್ನು ನ್ಯಾಯಯುತವಾಗಿ ಮಾಡಬೇಕು ಮತ್ತು ಈ ಅವ್ಯವಹಾರದಲ್ಲಿ ಶಾಮಿಲಾಗಿರುವ ಎಲ್ಲಾ ತಪ್ಪಿಸ್ತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ಮಾಫಿಯಾ ಸಂಘ ಈವರೆಗೆ ನಡೆಸಿದ ಹಿಂಭಾಗದ ನೇಮಕಾತಿ ಬಗ್ಗೆ ತನಿಖೆ ಆಗಬೇಕೆಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.