HEALTH TIPS

ಸಮಾಜದ ಸ್ವಾಸ್ಥ್ಯ ಕಾಪಾಡಲು ಮದ್ಯವರ್ಜನ ಶಿಬಿರ ನೆರವಾಗಲಿದೆ: ಚಲಚಿತ್ರ ನಿರ್ದೇಶಕ ಕಿರಣ್ ರಾಜ್

ಮುಳ್ಳೇರಿಯ: ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗಡೆಯವರು ಮುನ್ನಡೆಸುತ್ತಿರುವ  ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅತಿ ಮುಖ್ಯವಾದ ಕಾರ್ಯಕ್ರಮ ಮದ್ಯವರ್ಜನ ಶಿಬಿರ ಮಹತ್ತರದ್ದಾಗಿದ್ದು, ಈ ಮೂಲಕ ಲಕ್ಷಾಂತರ ಕುಟುಂಬದ ಬಾಳಿಗೆ ಬೆಳಕಾಗಿದ್ದಾರೆ. ಮದ್ಯವ್ಯಸನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತವೆ. ಕುಡಿತದ ಚಟದಿಂದ ಹಲವು  ಕುಟುಂಬಗಳು ಹಾಳಾಗಿವೆ. ಮದ್ಯವ್ಯಸನದಿಂದ ಕೊಲೆ ಮತ್ತು ದರೋಡೆಯಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಶಿಬಿರ ನೆರವಾಗಲಿದೆ ಎಂದು ಖ್ಯಾತ ಚಲಚಿತ್ರ ನಿರ್ದೇಶಕ ಕಿರಣ್ ರಾಜ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ನಡೆಯುತ್ತಿರುವ 1878ನೇ  ಮದ್ಯವರ್ಜನ ಶಿಭೀರದ 4 ನೆಯ ದಿನದ ಕಾರ್ಯಕ್ರಮಕ್ಕೆ ಆಗಮಿಸಿ ಶಿಬಿರಾರ್ಥಿಗನ್ನು ಉದ್ದೇಶಿಸಿ ಅವರು ಮಾತನಾಡಿಸದರು.

ಸಂಸ್ಥೆಯು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಉದ್ದೇಶವನ್ನು ಹೊಂದಿದೆ. ಒಂದು ದುಶ್ಚಟ ಇಡೀ ಕುಟುಂಬದ ವಿನಾಶಕ್ಕೆ ಕಾರಣವಾಗುತ್ತದೆ. ವೀರೇಂದ್ರ ಹೆಗಡೆಯವರು ವ್ಯಸನಮುಕ್ತ ಸಮಾಜದ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಉತ್ತಮ ಸಮಾಜದ ನಿರ್ಮಾಣದಲ್ಲಿ ಇದು 1878ನೇ ಶಿಬಿರವಾಗಿದೆ.  ಬಾಲ್ಯದಲ್ಲಿ ನಾನು ಜೀವನೋಪಾಯಕ್ಕೆ ಬಾರಿನಲ್ಲಿ ಕೆಲಸ ಮಾಡಿದ್ದೆ ಅವಾಗ ಮದ್ಯ ವ್ಯಸನಿಗಳ ಜೀವನ ಶೈಲಿ ಕಂಡು ಕುಡಿತದ ಚಟದಿಂದ ಆರೋಗ್ಯ ಮತ್ತು ಹಣ ಮತ್ತು ಗೌರವವನ್ನು  ಕಳೆದುಕೊಂಡವರನ್ನು ಕಂಡಿದ್ದೇನೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಜಾಗೃತಿ ವೇದಿಕೆಯ ಮೂಲಕ ಜಡಿ ವೀರೇಂದ್ರ ಹೆಗ್ಗಡೆಯವರ ಪಾನ ಮುಕ್ತ ಸಮಾಜ ನಿರ್ಮಾಣದ ಕನಸನ್ನು ಕರ್ನಾಟಕ ರಾಜ್ಯಾದ್ಯಂತ ಸಹಿತ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ  ಶಿಬಿರ ಆಯೋಜಿಸಿರುವ ಮೂಲಕ ಗಡಿನಾಡ ಜನರಿಗೂ ಪಾನಮುಕ್ತ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಪಾನ ಮುಕ್ತರಾಗಿ ಅದೆಷ್ಟೋ ಮಂದಿ ನವಜೀವನ ತೊಡಗಿ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ ಕ್ಷೇತ್ರದ ಭಕ್ತಿ ಹಾಗು ಪೂಜ್ಯರ ಅಭಿಮಾನದಿಂದ ಮುಳ್ಳೇರಿಯದಲ್ಲಿ ನಡೆಯುವ 1878ನೇ ಮದ್ಯವರ್ಜನ ಶಿಬಿಕ್ಕೆ ಆಗಮಿಸಿರುವಾದಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕ ಜನ ಜಾಗೃತಿ ವೇದಿಕೆ ಅಧ್ಯಕ್ಷ  ಅಖಿಲೇಶ್ ನಗುಮುಗಂ ಅವರು ಈ ಸಂದರ್ಭದಲ್ಲಿ ಕಿರಣ್ ರಾಜ್ ಅವರನ್ನು ಶಾಲು ಹೊದೆಸಿ ಗೌರವಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ಶಿವಕೃಷ್ಣ ಭಟ್ ಬಳಕ್ಕ, ಶಿಬಿರಾಧಿಕಾರಿ ದಿವಾಕರ ಪೂಜಾರಿ ಮುಳ್ಳೇರಿಯ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ ರಾಜೀವ್, ಮೇಲ್ವಿಚಾರಕ ಸುರೇಶ್,ಸುಮಾಲತಾ ಎಡನೀರು ಮತ್ತು ವಲಯದ ಸೆವಾಪ್ರತಿನಿಧಿಗಳು   ನವಜೀವನ ಸದಸ್ಯರು ಶೌರ್ಯ ಘಟಕ ಸದಸ್ಯರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries