ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು, ರಕ್ತದಲ್ಲಿನ ಸಕ್ಕರೆ (Diabetes Tips) ಮಟ್ಟ ಹೆಚ್ಚಾದಾಗ ಈ ಸಮಸ್ಯೆ ಕಾಡುತ್ತದೆ. ಇದು ಒಮ್ಮೆ ಬಂದರೆ ಇದನ್ನು ಗುಣಪಡಿಲು ಸಾಧ್ಯವಿಲ್ಲ. ಆಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗುತ್ತದೆ.
ನಿತ್ಯಪುಷ್ಪ ಬಳಸುವುದರಿಂದಾಗುವ ಪ್ರಯೋಜನಗಳು:
*ಆಯಂಟಿ ಆಕ್ಸಿಡೆಂಟ್ ಗುಣ
ನಿತ್ಯಪುಷ್ಪ ಆಯಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಲ್ಲಿ ಫ್ರೀ ರಾಡಿಕಲ್‍ಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ದೇಹದ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
*ಇನ್ಸುಲಿನ್ ಮಟ್ಟ ಹೆಚ್ಚಳ :
ನಿತ್ಯಪುಷ್ಪವು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಇದು ದೇಹವು ಇನ್ಸುಲಿನ್ ಅನ್ನು ಉತ್ತಮವಾಗಿ ಬಳಸಲು ಸಹಾಯ ಮಾಡುತ್ತದೆ. ಇದರಿಂದ ಮಧುಮೇಹ ನಿರ್ವಹಣೆಗೆ ಮಾಡಲು ಸಾಧ್ಯವಾಗುತ್ತದೆ.
*ಇತರ ಪ್ರಯೋಜನಗಳು:
ನಿತ್ಯಪುಷ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿತ್ಯಪುಷ್ಪವನ್ನು ಬಳಸುವ ವಿಧಾನ:
ನಿತ್ಯಪುಷ್ಪದ ಎಲೆಗಳನ್ನು ನೀರಿನಲ್ಲಿ ಕುದಿಸಿ ಚಹಾವನ್ನು ತಯಾರಿಸಿ. ಬೆಳಿಗ್ಗೆ ಮತ್ತು ಸಂಜೆ ಇದನ್ನು ಕುಡಿಯಿರಿ. ಇದಲ್ಲದೆ, ತಾಜಾ ನಿತ್ಯಪುಷ್ಪದ ಎಲೆಗಳಿಂದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಒಣಗಿದ ನಿತ್ಯಪುಷ್ಪದ ಎಲೆಗಳನ್ನು ಪುಡಿ ಮಾಡಿ ಕೂಡ ಬಳಸಬಹುದು. ದಿನಕ್ಕೆ ಎರಡು ಬಾರಿ ಒಂದು ಟೀಸ್ಪೂನ್ ನೀರಿನೊಂದಿಗೆ ಬೆರೆಸಿ ತೆಗೆದುಕೊಳ್ಳಿ.
ಆದರೆ ಈಗಾಗಲೇ ಬೇರೆ ಯಾವುದಾದರೂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ನಿತ್ಯಪುಷ್ಪವನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ನಿತ್ಯಪುಷ್ಪವನ್ನು ಅತಿಯಾಗಿ ಸೇವಿಸುವುದು ಹಾನಿಕಾರಕವಾಗಿದೆ. ಇದನ್ನು ಯಾವಾಗಲೂ ನಿಯಮಿತವಾಗಿ ಸೇವಿಸಿ.