ಬದಿಯಡ್ಕ : ಡಿಸೆಂಬರ್ 22ರಿಂದ 30 ರ ತನಕ ನಡೆಯುವ ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಕಳಿಯಾಟ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನೆರವೇರಿಸಿದರು.
ಭಾನುವಾರ ಶ್ರೀ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರೀಶ್ ಕುಣಿಕುಳ್ಳಯ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ನಿಧಿ ಸಂಚಯನಕ್ಕೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಸಾಸ್ತಾರ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ ಕಿಶೋರ್ ಕುಮಾರ್ ಉಬ್ರಂಗಳ ಚಾಲನೆ ನೀಡಿದರು. ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಹರಿನಾರಾಯಣ ಶಿರಂತಡ್ಕ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ, ವಸಂತ ಪೈ ಬದಿಯಡ್ಕ, ಜಯದೇವ ಖಂಡಿಗೆ, ಡಾ ವೇಣುಗೋಪಾಲ ಕಳೆಯತ್ತೊಡಿ, ಆನಂದ ಮವ್ವಾರು, ಯೋಗೀಶ ಶರ್ಮಾ ಬಳ್ಳಪ್ಪದವು, ಪ್ರೊ.ಎ. ಶ್ರೀನಾಥ್, ಪ್ರಶಾಂತ್ ಕುಣಿಕುಳ್ಳಾಯ, ತಂಬಾನ್ ಆನೆಕ್ಕಲ್, ಮಣಿಕಂಠನ್ ಕೊಳಗ, ಸಂಜೀವ ಶೆಟ್ಟಿ ಮೊಟ್ಟೆಕ್ಕುಂಜ, ಗೋಪಾಲಕೃಷ್ಣ ವಾಂತಿಚ್ಚಾಲು, ಸತೀಶ್ ಮಾಸ್ತರ್, ಕಿರಣ್ ಕುಮಾರ್ ಕುಣಿಕುಳ್ಳಾಯ, ರಾಜಶೇಖರ ಪದ್ಮಾರು,ಬಾಬು ಚೆರ್ವತೂರ್ ಕುರುಪ್, ಶ್ರೀಧರ ಮಾಸ್ತರ್ ಡೆಕ್ಕತ್ತೊಡಿ, ಜಯನ್ ಕಾಸರಗೋಡು, ಸುವರ್ಣ ಮಾಸ್ತರ್, ಚಂದ್ರಶೇಖರ ಅನಂತಪುರ, ರಾಜೀವ್ ಚೆರುವತ್ತೂರ್, ನಾರಾಯಣ ಸೂರಂಬೈಲ್, ಸತೀಶ್ ಉಬ್ರಂಗಳ ಮುಂತಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಚಂದ್ರಶೇಖರ ಕುರುಪ್ ಸ್ವಾಗತಿಸಿ, ಸುನಿಲ್ ಕುಮಾರ್ ಅನಂತಪುರ ವಂದಿಸಿದರು. ರಮೇಶ್ ಕೃಷ್ಣ ನಿರೂಪಿಸಿದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳನ್ನು ಸಿಂಗಾರಿ ಮೇಳ ಮತ್ತು ಪೂರ್ಣಕುಂಭದೊಂದಿಗೆ ಶ್ರೀ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು.