HEALTH TIPS

ನಸ್ರಲ್ಲಾ ಉತ್ತರಾಧಿಕಾರಿ ಸೈಫುದ್ದೀನ್ ಗುರಿಯಾಗಿಸಿ ಬಾಂಬ್‌ ಮಳೆಗರೆದ ಇಸ್ರೇಲ್

 ಟೆಲ್ ಅವಿವ್ : ಹತ್ಯೆಗೀಡಾದ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನ ಸೋದರ ಸಂಬಂಧಿ ಹಾಗೂ ಆತನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವ ಹಶೀಂ ಸೈಫುದ್ದೀನ್ ‌ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಶುಕ್ರವಾರ ಭಾರಿ ಬಾಂಬ್ ದಾಳಿ ನಡೆಸಿವೆ.

ಲೆಬನಾನ್ ರಾಜಧಾನಿ ಬೈರೂತ್‌ ಸಮೀಪ ಇದ್ದ ಭೂಗತ ಬಂಕರ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ,

ಹಿಜ್ಬುಲ್ಲಾ ನಾಯಕರು ಸಭೆ ನಡೆಸುತ್ತಿದ್ದ ಸ್ಥಳವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ ವಿಮಾನಗಳು ಬಾಂಬ್‌ ಮಳೆಗರೆದಿವೆ ಎಂದು ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುದ್ಧ ಆರಂಭವಾದ ಬಳಿಕ ಇಸ್ರೇಲ್ ನಡೆಸಿದ ಅತಿ ದೊಡ್ಡ ಬಾಂಬ್ ದಾಳಿ ಇದಾಗಿದೆ ಎಂದು ಲೆಬನಾನ್‌ನ ಸರ್ಕಾರಿ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಹಿಜ್ಬುಲ್ಲಾ ಹಿಡಿತ ಇರುವ ದಕ್ಷಿಣ ಬೈರೂತ್‌ನ ಜನನಿಬಿಡ ಧೈಯಾ ಪ್ರದೇಶದಲ್ಲಿ ಈ ಸರಣಿ ಬಾಂಬ್ ದಾಳಿ ನಡೆಸಲಾಗಿದೆ. ಬಾಂಬ್ ದಾಳಿಯ ಅಲೆಗಳು ಇಡೀ ನಗರವನ್ನು ಆವರಿಸಿದ್ದು, ದಾಳಿಯ ತೀವ್ರತೆಗೆ ಕಟ್ಟಡಗಳು ಕಂಪಿಸಿವೆ. ದಾಳಿಯ ಶಬ್ದ 15 ಮೈಲಿ ದೂರದವರೆಗೂ ಕೇಳಿಸಿದೆ. ದಾಳಿಯ ಬಳಿಕ ಸೈಫುದ್ದೀನ್ ಸಹಿತ ಹಿಜ್ಬುಲ್ಲಾ ನಾಯಕರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries