ಪೆರ್ಲ: ಬೆದ್ರಂಪಳ್ಳದ ಎಸ್.ಎಂ.ಕಲಾ ಹಾಗೂ ಕ್ರೀಡಾ ಸಂಘದ ವಾರ್ಷಿಕ ಮಹಾಸಭೆ ಬೆದ್ರಂಪಳ್ಳ ಎಎಲ್ ಪಿ ಶಾಲೆಯಲ್ಲಿ ಜರಗಿತು. ಸಂಘದ ಅಧ್ಯಕ್ಷ ಪ್ರಕಾಶ್ .ಕೆ.ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಜನಾರ್ಧನ ಕೆ. ವರ್ಷಗತ ವರದಿ ಮಂಡಿಸಿದರು. ಸಂಘವು 25ನೇ ವರ್ಷದ ರಜತ ಸಂಭ್ರಮದಲ್ಲಿದ್ದು ವರ್ಷ ಪೂರ್ತಿಯಾಗಿ 25 ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
2025 ಎಪ್ರಿಲ್ 24ರಂದು ರಜತ ಮಹೋತ್ಸವದ ಸಮಾರೋಪ ಸಮಾರಂಭ ನಡೆಸಲಾಗುವುದು. ಈ ಸಂದರ್ಭ ನೂತನ ವರ್ಷದ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಚಂದ್ರ ನಾಯ್ಕ ಎಂ.(ಅಧ್ಯಕ್ಷ) ,ಪ್ರಕಾಶ್ ಕೆ.(ಉಪಾಧ್ಯಕ್ಷ), ಅವಿನಾಶ್ ಸಿ.ಎಚ್(ಪ್ರ.ಕಾರ್ಯದರ್ಶಿ), ಸಂಧ್ಯಾ ಕೆ.(ಜತೆ ಕಾರ್ಯದರ್ಶಿ), ರಮೇಶ್ ಕೆ (ಕೋಶಾಧಿಕಾರಿ) ಅವರನ್ನು ಆಯ್ಕೆ ಮಾಡಲಾಯಿತು. ಜನಾರ್ದನ ಕೆ ಸ್ವಾಗತಿಸಿ, ಅಶ್ವಿತ ಕುಮಾರಿ ವಂದಿಸಿದರು.