ಪೆರ್ಲ: ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ ಮಲೆತಡ್ಕದಲ್ಲಿ ಇಂದು (ಮಂಗಳವಾರ) ವಿಶೇಷ ಆರಾಧನಾ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆ 07.30 ಕ್ಕೆ ಶ್ರೀ ದೈವಕ್ಕೆ ಸೀಯಾಳ ಸಮರ್ಪಣೆ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.
ಬಳಿಕ 12 ಕಾಯಿ ಗಣಹವನ, ಮೃತ್ಯುಂಜಯ ಹವನ, ಕೃಷ್ಣ ಹವನ, ದುರ್ಗಾ ಹವನ, ಕನ್ನಿಕಾ -ಸುಹಾಸಿನಿಯರ ಆರಾಧನೆ, ಬ್ರಾಹ್ಮಣ ಆರಾಧನೆ, ಬ್ರಾಹ್ಮಣ ಸಂತರ್ಪಣೆ, (ಅನ್ನ ಪ್ರಸಾದ ವಿತರಣೆ), ಸಂಜೆ ಆಶ್ಲೇಷಾ ಬಲಿ, ಕೃಷ್ಣ ಪೂಜೆ, ದುರ್ಗಾ ಪೂಜೆ, ಶ್ರೀ ದೈವಕ್ಕೆ ತಂಬಿಲ ಸೇವೆ,ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ ಎಂದು ಶ್ರೀಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
.