ಚೆನ್ನೈ: ತಮಿಳುನಾಡಿನ ಕಾವರೈಪೇಟೈ ಸಮೀಪದಲ್ಲಿ ಅಪಘಾತಕ್ಕೀಡಾದ ಮೈಸೂರು-ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರು ಶನಿವಾರ ಮುಂಜಾನೆ ವಿಶೇಷ ರೈಲಿನ ಮೂಲಕ ದರ್ಭಾಂಗಕ್ಕೆ ಹೊರಟಿದ್ದಾರೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ಚೆನ್ನೈ: ತಮಿಳುನಾಡಿನ ಕಾವರೈಪೇಟೈ ಸಮೀಪದಲ್ಲಿ ಅಪಘಾತಕ್ಕೀಡಾದ ಮೈಸೂರು-ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರು ಶನಿವಾರ ಮುಂಜಾನೆ ವಿಶೇಷ ರೈಲಿನ ಮೂಲಕ ದರ್ಭಾಂಗಕ್ಕೆ ಹೊರಟಿದ್ದಾರೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ಅಕ್ಟೋಬರ್ 11, ಶುಕ್ರವಾರ ರಾತ್ರಿ ಸುಮಾರು 8.30ಕ್ಕೆ 12578 ಸಂಖ್ಯೆಯ ಮೈಸೂರು-ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್, ಗೂಡ್ಸ್ ರೈಲಿಗೆ ಡಿಕ್ಕಿಯಾಗಿ 19 ಮಂದಿ ಗಾಯಗೊಂಡಿದ್ದರು.
ಪ್ರಯಾಣಿಕರನ್ನು ಬಸ್ ಮೂಲಕ ಪೊನ್ನೇರಿಗೆ, ಬಳಿಕ ಅಲ್ಲಿಂದ ಎರಡು ಇಎಂಯು ಮೂಲಕ ಚೆನ್ನೈ ಸೆಂಟ್ರಲ್‌ಗೆ ಕರೆದೊಯ್ಯಲಾಯಿತು ಎಂದು ರೈಲ್ವೆ ತಿಳಿಸಿದೆ.
ಎಲ್ಲ ಪ್ರಯಾಣಿಕರು ಆಗಮಿಸಿದ ನಂತರ ಅರಕ್ಕೋಣಂ, ರೇಣಿಗುಂಟಾ ಮತ್ತು ಗುಡೂರ್ ಮೂಲಕ ದರ್ಭಾಂಗ ಕಡೆಗೆ ಮುಂಜಾನೆ 4.45ಕ್ಕೆ ವಿಶೇಷ ರೈಲು ಹೊರಟಿತು. ಪ್ರಯಾಣಿಕರಿಗೆ ಆಹಾರದ ಪೊಟ್ಟಣ ಹಾಗೂ ನೀರನ್ನು ಒದಗಿಸಲಾಯಿತು ಎಂದು ತಿಳಿಸಿದೆ.
ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ ತೆರೆಯಲಾಗಿದೆ.