HEALTH TIPS

ಏರ್‌ ಶೋ: ಅವ್ಯವಸ್ಥೆ ಆರೋಪ ಅಲ್ಲಗಳೆದ ಡಿಎಂಕೆ ಸರ್ಕಾರ

 ಚೆನ್ನೈ: ಭಾರತೀಯ ವಾಯು ಪಡೆಯ (ಐಎಎಫ್‌) ವೈಮಾನಿಕ ಪ್ರದರ್ಶನದ ವೇಳೆ ಅವ್ಯವಸ್ಥೆಯಿಂದಾಗಿ ಐದು ಮಂದಿ ನಾಗರಿಕರ ಸಾವು ಸಂಭವಿಸಿದೆ ಎನ್ನುವ ಆರೋಪಗಳನ್ನು ತಮಿಳುನಾಡು ಸರ್ಕಾರ ತಳ್ಳಿ ಹಾಕಿದೆ. ಅಲ್ಲದೆ, ಐಎಎಫ್‌ ಸಲ್ಲಿಸಿದ್ದ ಕೋರಿಕೆಗೂ ಮೀರಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು ಎಂದೂ ಹೇಳಿದೆ.

ಮರೀನಾ ಬೀಚ್‌ನಲ್ಲಿ ವೈಮಾನಿಕ ಪ್ರದರ್ಶನ ವೀಕ್ಷಿಸಲು ಸೇರಿದ್ದ ಸುಮಾರು 15 ಲಕ್ಷ ವೀಕ್ಷಕರಿಗೆ ಸರಿಯಾದ ಸೌಲಭ್ಯ ಕಲ್ಪಿಸಿರಲಿಲ್ಲ. ಕುಡಿಯುವ ನೀರು ಮತ್ತು ಸೂಕ್ತ ಸಾರಿಗೆ ವ್ಯವಸ್ಥೆ ಇರಲಿಲ್ಲ ಎನ್ನುವ ಆರೋಪಗಳನ್ನು ರಾಜ್ಯ ಸರ್ಕಾರ ತಳ್ಳಿಹಾಕಿದ್ದು, ಬಿಸಿಲ ಝಳದಿಂದ ಉಂಟಾದ ಆರೋಗ್ಯ ಸಮಸ್ಯೆಯಿಂದ ಈ ಸಾವುಗಳು ಸಂಭವಿಸಿವೆ ಎಂದು ಹೇಳಿದೆ.

ಎಐಎಡಿಎಂಕೆ ಮತ್ತು ಬಿಜೆಪಿಯಂತಹ ವಿರೋಧ ಪಕ್ಷಗಳಿಂದ ಮಾತ್ರವಲ್ಲದೆ, ತನ್ನ ಮಿತ್ರ ಪಕ್ಷಗಳಾದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಕಾಂಗ್ರೆಸ್‌ನಿಂದಲೂ ಡಿಎಂಕೆ ಸರ್ಕಾರ ವಾಗ್ದಾಳಿಗೆ ತುತ್ತಾಗಿದೆ. ವೈಮಾನಿಕ ಪ್ರದರ್ಶನ ವೀಕ್ಷಿಸಲು ಬಂದವರನ್ನು ನಿಭಾಯಿಸಲು ಮತ್ತು ಅವರಿಗೆ ಕಲ್ಪಿಸಿದ್ದ ವ್ಯವಸ್ಥೆ ಅತ್ಯಂತ ಕಳಪೆಯಾಗಿತ್ತು ಎಂದು ರಾಜಕೀಯ ನಾಯಕು ಪಕ್ಷಾತೀತವಾಗಿ ದೂಷಿಸಿದರು. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರದ ಗೃಹ ಕಾರ್ಯದರ್ಶಿ ಧೀರಜ್ ಕುಮಾರ್ ಅವರು ಘಟನೆಯ ಕುರಿತು ಸಮಗ್ರ ವರದಿ ನೀಡುವಂತೆ ಡಿಜಿಪಿ ಶಂಕರ್ ಜಿವಾಲ್ ಅವರಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಂತ್ರಸ್ತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಆಯೋಜಕರ ನಿರೀಕ್ಷೆಗೂ ಮೀರಿ ವೀಕ್ಷಕರು ವೈಮಾನಿಕ ಪ್ರದರ್ಶನ ನೋಡಲು ಸೇರಿದ್ದರಿಂದಾಗಿ, ಪ್ರದರ್ಶನದ ನಂತರ ಸಾರ್ವಜನಿಕ ಸಾರಿಗೆ, ಸ್ವಂತ ವಾಹನಗಳನ್ನು ತಲುಪುಲು ಜನರು ಸಾಕಷ್ಟು ಪರದಾಡಿದರು ಎನ್ನುವುದನ್ನು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ.

'ಸಾವು ರಾಜಕೀಯಗೊಳಿಸಬೇಡಿ'

'ಭಾನುವಾರ ಪ್ರಾಣ ಕಳೆದುಕೊಂಡ ಎಲ್ಲ ಐದು ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ತರವಾಗಲೇ ಅವರು ಮೃತಪಟ್ಟಿದ್ದರು. ಚಿಕಿತ್ಸೆ ಸಿಗದೆ ಅವರು ಸತ್ತಿಲ್ಲ. ನಾವು ಸಾವುನೋವು ಮರೆಮಾಚಲು ಪ್ರಯತ್ನಿಸುತ್ತಿಲ್ಲ. ಬಿಸಿಲ ಝಳ ಸಂಬಂಧಿತ ಸಮಸ್ಯೆಗಳಿಂದ ಐದು ಜನ ಸತ್ತಿದ್ದಾರೆ ಎನ್ನುವುದನ್ನು ನಾವು ಒಪ್ಪುತ್ತೇವೆ. ಇದು ದುರದೃಷ್ಟಕರ. ಅವರ ಸಾವಿನ ಬಗ್ಗೆ ನಾವು ವಿಷಾದಿಸುತ್ತೇವೆ. ಆದರೆ ಈ ಸಾವುಗಳನ್ನು ಯಾರೂ ರಾಜಕೀಯಗೊಳಿಸಬಾರದು' ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

'ಜನಸಂದಣಿ ನಿಭಾಯಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ವೀಕ್ಷಕರಿಗೆ ಬರುವಾಗ, ಛತ್ರಿ, ಕುಡಿಯುವ ನೀರು ತರಲು, ಟೋಪಿ ಮತ್ತು ಕೂಲಿಂಗ್ ಗ್ಲಾಸ್‌ಗಳನ್ನು ಧರಿಸಲು ಐಎಎಫ್ ಕೂಡ ಸಲಹೆ ನೀಡಿತ್ತು' ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries