ಮಂಜೇಶ್ವರ: ರಾಜ್ಯ ಆಡಳಿತ ಮಾಡುವ ಎಡರಂಗ ಸರ್ಕಾರದ ಪ್ರಭಾವ ಬಳಸಿ ಸುಳ್ಳು ಹೇಳಿ ನಕಲಿ ದಾಖಲೆ ಸೃಷ್ಟಿಸಿ ಅನೇಕ ಜನತೆಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ವಂಚಕಿ ಸಚಿತಾ ರೈ ಯನ್ನು ವಿವಿಧ ಠಾಣೆಗಳಲ್ಲಿ ದೂರು ದಾಖಲಾದರೂ, ಮಾನ್ಯ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಬಂಧಿಸದೆ ಇರುವ ಕೇರಳ ಪೋಲೀಸ್ ಇಲಾಖೆಯ ವಿಳಂಬ ನೀತಿ ಖಂಡನೀಯ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಸಿಪಿಎಂ ಪಕ್ಷ ತೋರಿಕೆಗೆ ಹೇಳಿಕೆ ನೀಡುವ ಬದಲು ತನ್ನ ಪಕ್ಷದ ಯುವ ನೇತಾರೆಯನ್ನು ಪೋಲೀಸ್ ವಶಕ್ಕೆ ಒಪ್ಪಿಸಬೇಕೆಂದು ಬಿಜೆಪಿ ಅಗ್ರಹಿಸಿದೆ.
ಕೇರಳ ಸರ್ಕಾರ ಬಡ ಜನತೆಯನ್ನು ವಂಚಿಸುತ್ತಿದೆ. ಲೇಬರ್ ಸೆಸ್ ಹೆಸರಲ್ಲಿ ಡೋರ್ ನಂಬರ್ ನೀಡಲು ಹನ್ನೆರಡು ಸಾವಿರ ಬಡವರಿಂದ ವಸೂಲಿ ಮಾಡುತ್ತಿರುವುದು ಹಗಲು ದರೋಡೆ ಎಂದು ಬಿಜೆಪಿ ಹೇಳಿದೆ.
ಯಾವುದೇ ಅಭಿವೃದ್ಧಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಸರ್ಕಾರ ವರ್ಗಾವಣೆ ದಂದೆಯನ್ನು ಮಾಡಿ ಸ್ಥಳೀಯ ಆಡಳಿತ ಪಂಚಾಯತಿಗಳನ್ನು ನಿಯಂತ್ರಣ ಮಾಡುತ್ತಿದೆ. ಮಂಜೇಶ್ವರ, ಉಪ್ಪಳ ಕೇಂದ್ರೀಕರಿಸಿ ಗಡಿ ಭಾಗದಲ್ಲಿ ನಡೆಯುವ ಗಾಂಜಾ, ಆಫೀಮು, ಮದ್ಯ ಮಾಫಿಯಗಳನ್ನು ನಿಯಂತ್ರಿಸುತ್ತಿಲ್ಲ. ಕಳ್ಳತನ ಆರೋಪಿಗಳನ್ನು ಪೋಲೀಸ್ ಬಂಧಿಸುವುದೂ ಇಲ್ಲ. ಇದೆಲ್ಲ ಸರ್ಕಾರದ ಆಡಳಿತದ ಬೇಜವಾಬ್ದಾರಿ ಎಂದು ಬಿಜೆಪಿ ತಿಳಿಸಿದೆ.
ಕೇಂದ್ರ 70ವರ್ಷ ಮೇಲ್ಪಟ್ಟವರಿಗೆ ನೀಡುವ ಉಚಿತ ಅಯುಷ್ಮಾನ್ ಯೋಜನೆಗೆ ಸೇರ್ಪಡೆಗೂ ಕೇರಳ ಅನುಮತಿಸದೆ ಸೇರ್ಪಡೆ ಆಗುತ್ತಿಲ್ಲ. ಇದು ಸರ್ಕಾರ ಬಡವರಿಗೆ ಮಾಡುವ ಅನ್ಯಾಯ.
ಮಂಜೇಶ್ವರ ಶಾಸಕರು ಕಣ್ಣಿದ್ದು ಕುರುಡುತನ ಪ್ರದರ್ಶನ ಮಾಡುತಿದ್ದಾರೆ. ಒಂದೇ ಒಂದು ಹೊಸ ಯೋಜನೆ ಮಂಜೇಶ್ವರಕ್ಕೆ ತಂದಿಲ್ಲ, ಮಾತ್ರವಲ್ಲ ಇಷ್ಟೆಲ್ಲ ಅನಾಹುತ, ಮಾಫಿಯ ಅಟ್ಟಹಾಸದ ವಿರುದ್ಧ ಕ್ರಮಕ್ಕೆ ಇಲಾಖೆಯನ್ನು ಅಗ್ರಹಿಸುತಿಲ್ಲ.
ಪೋಲೀಸ್ ಇಲಾಖೆ ವಿರುದ್ದ ಬೃಹತ್ ಪ್ರತಿಭಟನೆಗೆ ಬಿಜೆಪಿ ತಯಾರಿ ನಡೆಸುತಿದೆ. ಸಚಿತಾರ ಬಂಧನ, ಕೋಳ್ಯೂರು ದೇವಸ್ಥಾನ ಕಳ್ಳತನದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳದಿರುವುದು, ವರ್ಕಾಡಿ ಚರ್ಚ್, ಕಳ್ಳತನ ಪ್ರಕರಣ ಬೇಧಿಸÀದ ಪೋಲೀಸ್ ಇಲಾಖೆ ನಾಡಿಗೆ ಅಗತ್ಯವಿದೆಯೇ ಎಂದು ಬಿಜೆಪಿ ಪ್ರಶ್ನೆಸಿದೆ.
ಬಿಜೆಪಿ ಮಾಸಿಕ ಸಭೆಯಲ್ಲಿ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದÀರು. ಜಿಲ್ಹಾ ಕಾರ್ಯದರ್ಶಿ ಮಣಿಕಂಠ ರೈ, ಎ.ಕೆ.ಕಯ್ಯಾರ್, ಲೋಕೇಶ್ ನೋಂಡ, ಕೆ.ವಿ.ಭಟ್, ಸದಾಶಿವ ಚೇರಾಲ್, ಚಂದ್ರಹಾಸ ಪೂಜಾರಿ,ದೂಮಪ್ಪ ಶೆಟ್ಟಿ, ನ್ಯಾಯವಾದಿ. ನವೀನ್ ರಾಜ್, ರಾಜಕುಮಾರ್, ರಕ್ಷಣ್ ಅಡಕಳ, ಮಂಜುನಾಥ್ ಶೆಟ್ಟಿ ಬಾಯಾರ್,ಯಾದವ ಬಡಾಜೆ, ಆಶಾಲತಾ ಬಿಎಂ,ಪದ್ಮಾನಾಭ ಕಡಪ್ಪರ ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ರವಿರಾಜ್ ವಂದಿಸಿದರು.