ಮಂಜೇಶ್ವರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ಆಶ್ರಯದಲ್ಲಿ ಇಂದು(ಅ.30 ಬುಧವಾರ) ಅಪರಾಹ್ನ 3ಕ್ಕೆ ಮಂಜೇಶ್ವರ ಗಿಳಿವಿಂಡುವಿನಲ್ಲಿ ಕಾಸರಗೋಡು ಜಿಲ್ಲೆಯ ಖ್ಯಾತ ಇತಿಹಾಸಕಾರ, ಸಾಹಿತಿ"ಬೇಕಲ ರಾಮ ನಾಯಕರ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ವಿಷಯ ಮಂಡಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಗಿಳಿವಿಂಡು ಸಮಿತಿ ಅಧ್ಯಕ್ಷ ಎಂ. ಉಮೇಶ್ ಸಾಲಿಯಾನ್ ಕಾಸರಗೋಡು ಹಾಗೂ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.