ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ವಿಶ್ವ ಹಿರಿಯರ ದಿನ ಆಚರಿಸಲಾಯಿತು. ಪ್ರಾಂಶುಪಾಲ ಶಂಕರ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನ ಜೀವನದ ಕೊನೆಯ ಹಂತದಲ್ಲಿ ಎಷ್ಟೋ ಜನ ಅವರ ಹಿರಿಯರನ್ನು ಅನಾಥಾಶ್ರಮಕ್ಕೆ ಕಳಿಸುವ ಮೂಲಕ ಅವರ ಸಂಧ್ಯಾಕಾಲದ ಸಂತೋಷವನ್ನು ಕಿತ್ತುಕೊಳ್ಳುತ್ತಿದ್ದಾರೆ. ನಾವು ಅವರ ಆ ಸಂತೋಷವನ್ನು ಕಿತ್ತುಕೊಳ್ಳದೆ ಅವರ ಸಂಧ್ಯಾಕಾಲವನ್ನು ಮಧುರವಾಗಿ ಕಳೆಯಲು ಪ್ರೋತ್ಸಾಹಿಸಬೇಕು ಎಂದರು.
ದಿನಾಚರಣೆ ಅಂಗವಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು.ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ವರ್ಷಿತ್ ಕೆ.ಕಾರ್ಯಕ್ರಮ ಸಂಯೋಜಿಸಿದರು.