ಕಾಸರಗೋಡು: ಬೇಕಲ ಕೋಟೆಯ ಎರಡನೇ ದ್ವಾರದ ಕಮಾನು ಮರು ನಿರ್ಮಿಸಲು ಕೇಂದ್ರ ಪರಂಪರೆ ಇಲಾಖೆ, ತ್ರಿಶೂರ್ ಸರ್ಕಲ್ ಹಾಗೂ ಬೇಕಲ ಪ್ರವಾಸೋದ್ಯಮ ಸಂಘಟನೆ ಜಂಟಿಯಾಗಿ ಹಳೆಯ ಛಾಯಾಚಿತ್ರ ಅಭಿಯಾನ ನಡೆಸುತ್ತಿವೆ.
ಕೋಟೆಯೊಳಗಿನ ಮುಖ್ಯಪ್ರಾಣ ದೇವಾಲಯದ ನಂತರ ಹಳೆಯ ಟಿಕೆಟ್ ಕೌಂಟರ್ ಪಕ್ಕದಲ್ಲಿ ಎರಡನೇ ಗೇಟ್ ಇದೆ. ಎರಡನೇ ಗೇಟ್‍ನ ಕಮಾನು ಸಹಿತ ಭಾವಚಿತ್ರ ಕಳುಹಿಸಿದವರಿಗೆ ಪ್ರಶಂಸನಾ ಪತ್ರ ಮತ್ತು ಸ್ಮರಣಿಕೆ ನೀಡಲಾಗುವುದು. ಪೋಟೋ ಬಂದ ನಂತರ ಕಮಾನು ಮರುಸೃಷ್ಟಿಸಲು ಕ್ರಮಕೈಗೊಳ್ಳಲಾಗುವುದು ಎಂದು ತ್ರಿಶೂರ್ ವೃತ್ತದ ಪುರಾತತ್ವಶಾಸ್ತ್ರಜ್ಞ ಕೆ ರಾಮಕೃಷ್ಣ ರೆಡ್ಡಿ ಮಾಹಿತಿ ನೀಡಿದ್ದಾರೆ. ಪೋಟೋ ಸಂಗ್ರಹ ಇರುವವರು ನವೆಂಬರ್ 15 ರ ಮೊದಲು circlethr.asi@gmail.com, bekaltourismfraternity@gmail.