ಮಂಜೇಶ್ವರ. ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲಾ ಪ್ರೀ ಪ್ರೈಮರಿ ವಿಭಾಗದ ವಿದ್ಯಾರ್ಥಿಗಳ ಹೆತ್ತವರ ಸಭೆ ಹಾಗೂ ತಿಳುವಳಿಕಾ ತರಗತಿ ಕಾರ್ಯಕ್ರಮ ಶಾಲಾ ಲೈಬ್ರೆರಿ ಹಾಲ್ ನಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ವಹಿಸಿ ಪ್ರೀ ಪ್ರೈಮರಿ ವಿಭಾಗದ ವ್ಯವಸ್ಥೆಯ ಬಗ್ಗೆ ತಿಳಿಸಿದರು. ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿ.ಎ.ಯು.ಪಿ ಶಾಲೆಯ ನಿವೃತ್ತ ಅಧ್ಯಾಪಕ ದಾಮೋದರ ಮೂಲ್ಯ ಕೆ. ಅವರು ಹೆತ್ತವರಿಗೆ ತಿಳುವಳಿಕಾ ತರಗತಿಯನ್ನು ನೀಡಿದರು. ಶಿಕ್ಷಕಿ ರಾಜೇಶ್ವರಿ ಟೀಚರ್ ನಿರೂಪಿಸಿ,ವಂದಿಸಿದರು.