HEALTH TIPS

ಸೀತಾಂಗೋಳಿಯಲ್ಲಿ ಶಿವಳ್ಳಿ ಭವನ ಉದ್ಘಾಟನೆ

ಕುಂಬಳೆ: ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿಯ ಸೀತಾಂಗೋಳಿಯಲ್ಲಿ ನಿರ್ಮಿಸಿದ ನೂತನ ಕಟ್ಟಡ ಶಿವಳ್ಳಿ ಭವನದ ಉದ್ಘಾಟನೆಯನ್ನು ಗುರುವಾರ ಎಡನೀರು ಮಠದ ಸ್ವಾಮೀಜಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬ್ರಹ್ಮಶ್ರೀ ಚಕ್ರಪಾಣಿ  ದೇವಪೂಜಿತ್ತಾಯರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ,  ಉಡುಪಿ ಮಾಧ್ವ ಬ್ರಾಹ್ಮಣ ಸಭಾ ಕೇರಳ ರಾಜ್ಯ ಇದರ ಕಾರ್ಯಾಧ್ಯಕ್ಷ ಶ್ರೀ ವಿಶ್ರುತ್ , ಉಡುಪಿ ಮಾಧ್ವ ಬ್ರಾಹ್ಮಣ ಸಭಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರಮಾ ದೇವಿ, ಸ್ವಯಂ ಪ್ರಭ ,ವೀಣಾ ಕಡಮಣ್ಣಾಯ, ಶಿವಳ್ಳಿ ಬ್ರಾಹ್ಮಣ ಸಭಾ ಇದರ  ಸ್ಥಾಪಕ ಅಧ್ಯಕ್ಷ ಬಿ ವಿಷ್ಣು ಕಕ್ಕಿಲ್ಲಾಯ, ಸ್ಥಾಪಕ ಕಾರ್ಯದರ್ಶಿ ರತನ್ ಕುಮಾರ್ ಕಾಮಡ, ರಕ್ಷಾಧಿಕಾರಿಗಳಾದ ವಿಷ್ಣು ಭಟ್ ಮಧೂರು ಹಾಗೂ ಸೀತಾರಾಮ ಕುಂಜಾತ್ತಾಯ, ಶಿವಳ್ಳಿ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಕಾರ್ಯದರ್ಶಿ ಚೇತನ್ ರಾಮ್ ನೂರಿತಾಯ, ಜೊತೆ ಕಾರ್ಯದರ್ಶಿ  ಮುರಳೀಧರ ಕಡಮಣ್ಣಯ ,ಕೋಶಾಧಿಕಾರಿ  ಸೀಮಾ ಬಿ  ಧಾರ್ಮಿಕ ಮುಂದಾಳು ಮಂಜುನಾಥ ಆಳ್ವ, ಪದ್ಮನಾಭ ರಾವ್ ಮುಂತಾದವರು ಭಾಗವಹಿಸಿ ಶುಭ ಹಾರೈಸಿದರು. 

ಸಭೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ  ರಾಧಾಕೃಷ್ಣ ರಾವ್ ಶಾಂತಕುಮಾರಿ ಟ್ರಸ್ಟ್ ನ ವತಿಯಿಂದ ಗೋಪಾಲಕೃಷ್ಣ ಆಯಂಬಾರೆಯವರು ನೀಡಿದ ಧನ ಸಹಾಯವನ್ನು ಎಡನೀರು ಶ್ರೀಗಳು ಮಂತ್ರಾಕ್ಷತೆಯೊಂದಿಗೆ ನೀಡಿ ಹರಸಿದರು. ಡಿಸೆಂಬರ ತಿಂಗಳಲ್ಲಿ ನಡೆಯುವ ಜಿಲ್ಲಾ ಕ್ರೀಡಾ ಹಾಗು ಸಾಂಸ್ಕøತಿಕ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಎಡನೀರು ಸ್ವಾಮೀಜಿಯವರು ಶ್ರೀನಿವಾಸ ಅಮ್ಮಣ್ಣಾಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.ಪುತ್ತಿಗೆ ಪಂಚಾಯತಿ ಉಪಾಧ್ಯಕ್ಷೆ ಜಯಂತಿ, ಸ್ಥಾಯೀ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಸದಸ್ಯರಾದ ಕಾವ್ಯ ಶ್ರೀ, ಅನಿತಾ ಶ್ರೀ, ಜನಾರ್ದನ ಪೂಜಾರಿ, ಯುವಶಕ್ತಿ ಘಟಕದ ಪ್ರದೀಪ ಅಡಿಗ, ಕಿಶೋರ್ ಕಲ್ಲೂರಾಯ,  ವಾಸುದೇವ ಕೊಳತ್ತಾಯ, ವಿಘ್ನರಾಜ, ಜನಾರ್ದನ ಎ.ಪಿ, ನಮಿತಾ ವಸಂತ್, ರಂಜನಿ, ಮಮತಾ ಚಕ್ರಪಾಣಿ, ಸುಮನಾ ಅಡಿಗ, ಕೀರ್ತಿ ರಂಜನ್, ಸುಕನ್ಯಾ ಉಳಿಯತ್ತಾಯ ಮುಂತಾದವರು ಶುಭಾಶಂಸನೆ ಗೈದರು. ಸಭೆಯಲ್ಲಿ ಕಟ್ಟಡ ನಿರ್ಮಾಣದ ರೂವಾರಿ ರಾಜನಾರಾಯಣ ಕೆ.ಬಿ. ದಂಪತಿಗಳನ್ನು ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ಶಾಲು ಹೊದಿಸಿ ಗೌರವಿಸಿದರು. ಇಂಜಿನಿಯರ್ ಶಿವಶಂಕರ್ ಇವರನ್ನು ಕೂಡ ಅಭಿನಂದಿಸಲಾಯಿತು. ಕುಮಾರಿ ವರ್ಷ ಅವರ ವಿದ್ಯಾಭ್ಯಾಸ ಸಾಧನೆಗೆ ಅವರನ್ನು ಶ್ರೀಗಳು ಅಭಿನಂದಿಸಿದರು. ಸೀತಾರಾಮ ಕಡಮಣ್ಣಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಯಭಾರತಿ ಪಟ್ಟೆರಿ ಪ್ರಾರ್ಥನೆ ಹಾಡಿದರು. ವಸಂತ ಕುಮಾರ್ ಸ್ವಾಗತಿಸಿ, ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ನಿರ್ವಹಿಸಿದರು. ಸುಮಂಗಲ ತಂತ್ರಿ ವಂದಿಸಿದರು.  ಬಳಿಕ ವಿವಿಧ ಕಲಾ ಕಾರ್ಯಕ್ರಮಗಳು ನಡೆದವು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries