ತಿರುವನಂತಪುರಂ: ಪತ್ರಕರ್ತರ ವಿರುದ್ಧದ ನಿಂದನಾತ್ಮಕ ಹೇಳಿಕೆಯ ನೀಡಿದ ಸಿಪಿಎಂ ಪಿ,ಬಿ.ಸದಸ್ಯ ವಿಜಯ ರಾಘವನ್ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಕೇರಳ ಪತ್ರಕರ್ತರ ಸಂಘ(ಕೆ.ಯು.ಡಬ್ಲ್ಯು.ಜೆ) ಆಗ್ರಹಿಸಿದೆ.
ಸಿಪಿಎಂ ಮುಖಂಡ ವಿಜಯರಾಘವನ್ ನಿಲಂಬೂರಿನಲ್ಲಿ ಮಾತನಾಡಿ, ಒಳ್ಳೆಯ ಬಟ್ಟೆ ಧರಿಸುವ ಪತ್ರಕರ್ತರು ಸುಳ್ಳು ಹೇಳುವ ಸಾಧ್ಯತೆ ಹೆಚ್ಚಿದ್ದು, ಒಳ್ಳೆಯ ಶರ್ಟ್, ಪ್ಯಾಂಟ್, ಲಿಪ್ ಸ್ಟಿಕ್ ಹಾಕಿಕೊಂಡವರ ಬಗ್ಗೆ ಎಚ್ಚರದಿಂದಿರಬೇಕು. ಈ ಪ್ರತಿಕ್ರಿಯೆಯು ಅವರು ಯಾವ ಯುಗದ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ ಎಂದಿದ್ದರು.
ರಾಜಕೀಯ ನಾಯಕರ ಮಾಡುವ ತಮಗೆ ಇಷ್ಟವಿಲ್ಲದ ಸುದ್ದಿಗಳನ್ನು ಟೀಕಿಸುತ್ತಾರೆ. ಇಂತಹ ಟೀಕೆ ಸಹಜ. ಆದರೆ ಪತ್ರಕರ್ತರ ಬಟ್ಟೆ ನೋಡಿ ಚಾರಿತ್ರ್ಯಹತ್ಯೆ ಮಾಡುತ್ತಿರುವುದು ತೀವ್ರ ಆಕ್ಷೇಪಾರ್ಹ ಎಂದು ಕೇರಳ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಎಂ.ವಿ. ವಿನೀತಾ ಮತ್ತು ಪ್ರಧಾನ ಕಾರ್ಯದರ್ಶಿ ಆರ್. ಕಿರಣ್ ಬಾಬು ಹೇಳಿದ್ದಾರೆ.