ಮಂಜೇಶ್ವರ: ದೇವಸ್ಥಾನ ಅಭಿವೃದ್ಧಿಯಾದರೆ ಊರು ಅಭಿವೃದ್ಧಿಯಾದಂತೆ, ದೇವಸ್ಥಾನಗಳು ಊರಿನ ಹೆಸರಿನೊಂದಿಗೆ ಗುರುತಿಸಲ್ಪಡಬೇಕು. ಅದಕ್ಕೊಂದು ಉದಾಹರಣೆ ಎಂಬಂತೆ ಕೀರ್ತೆಶ್ವರ ಊರು ದೇವರ ಅನುಗ್ರಹದಿಂದ ಕೀರ್ತಿವಂತವಾಗಿದೆ. ಕ್ಷೇತ್ರದ ಜೀರ್ಣೋದ್ಧಾರಕ್ಕೆ ಊರಿನ ಸದ್ಭಕ್ತರು ತಮ್ಮನ್ನು ತಾವು ತೊಡಗಿಸಿಕೊಂಡು ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯಗಳು ಸಾಕರವಾಗುವಲ್ಲಿ ಎಂದು ಎಡನೀರು ಮಠಾಧೀಶÀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ನುಡಿದರು.
ಅವರು ಮಂಜೇಶ್ವರ ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ನೂತನ ರಾಜಗೋಪುರದ ಶಿಲಾನ್ಯಾಸ ಕಾರ್ಯಕ್ರಮವನ್ನು ನಿನ್ನೆ ಬೆಳಗ್ಗೆ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನವಿತ್ತರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರು ದೇವಾನಂದ ಸ್ವಾಮೀಜಿ ಅವರು, ತಮ್ಮ ಆಶೀರ್ವಚನÀ ಸಂದೇಶ ನೀಡಿ, ಸತ್ಕರ್ಮ, ದಾನಗಳಿಂದ ನಮ್ಮ ಹೆಸರು ನಾವು ಅಳಿದ ಮೇಲೂ ಉಳಿಯುತ್ತz. ಧರ್ಮ ಶ್ರದ್ಧೆಯಿಂದ ಉತ್ತಮವಾದ ಸಮಾಜ, ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಉಪಸ್ಥಿತರಿದ್ದ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನವಿತ್ತು, ಅಂತರಂಗದಲ್ಲಿ ದೇವರನ್ನು ನೆನೆದರೆ ಎಲ್ಲರೂ ದೇವರಂತೆ ಕಾಣುತ್ತಾರೆ. ಪ್ರತಿಯೋಂದು ಅಣುರೇಣು ಕಣದಲ್ಲಿ ದೇವರಿದ್ದಾನೆ. ದೇವರನ್ನು ಅಂತರಮುಖ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಬೇರೆಯವರನ್ನು ಸೋಲಿಸಲು ಪ್ರಯತ್ನಿಸದೆ, ನಮ್ಮನ್ನು ನಾವು ಪರಾಭವಗೊಳಿಸಲು ಪ್ರಯತ್ನಿಸಿದಾಗ ಗೆಲುವು ನಮ್ಮದಾಗುತ್ತದೆ. ಅಧ್ಯಾತ್ಮದ ಭಾವನೆ ಮತ್ತು ಪ್ರೀತಿಯಿಂದ ಕೆಲಸ ಮಾಡಿದರೆ ನಮ್ಮ ಸುತ್ತಲಿನ ಪರಿಸರ ನಮ್ಮದಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರದ ತಂತ್ರಿವರ್ಯ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಸಭಾಧ್ಯಕ್ಷತೆ ವಹಿಸಿದ್ದರು. ಆರ್ಯಭಟ ಪ್ರಶಸ್ತಿ ವಿಜೇತ ಉದ್ಯಮಿ, ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ, ಮಂಜೇಶ್ವರ ಶ್ರೀ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ಕೃಷ್ಣ ಭಟ್ ಮಂಜೇಶ್ವರ, ಕ್ಷೇತ್ರದ ಪ್ರಧಾನ ಅರ್ಚಕÀ ರವೀಶ್ ಭಟ್ ಕೀರ್ತೇಶ್ವರ, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಳಪ್ಪಾಡ, ಕ್ಷೇತ್ರದ ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ, ರಾಜಸ್ಥಾನದ ಉದ್ಯಮಿ ಸತೀಶ್ ಉಚ್ಚಿಲ, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಂಘ ಅತ್ತಾವರ, ಮಂಗಳೂರಿನ ಅಧ್ಯಕ್ಷ ವಿಶ್ವಾಸ್ ದಾಸ್, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವನಾಥ ಪೆÇಯ್ಯಕಂಡ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಬಂಗೇರ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಈ ವೇಳೆ ಗೋಪುರ ನಿರ್ಮಾಣದ ದಾನಿಗಳಾದ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ ಮತ್ತು ರಾಜಸ್ಥಾನದ ಉದ್ಯಮಿ ಸತೀಶ್ ಉಚ್ಚಿಲರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ನಟ್ಟಿಬೈಲ್ ಕೀರ್ತೇಶ್ವರ ಸ್ವಾಗತಿಸಿ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಬಂಗೇರ ಪ್ರಾಸ್ತಾವಿಕ ಮಾತುಗಳನ್ನಾಡಿ, ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಶ್ ಅಂಜರೆ ವಂದಿಸಿದರು.
ಕಾರ್ಯಕ್ರಮದಂಗವಾಗಿ ಬೆಳಗ್ಗೆ ಸ್ವಾಮೀಜಿಯವರನ್ನು, ತಂತ್ರಿವರ್ಯರನ್ನು, ಅತಿಥಿಗಳನ್ನು ಮಂಜೇಶ್ವರ ದ್ವಿತೀಯ ರೈಲ್ವೆ ಗೇಟ್ ಬಳಿಯ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಿಂದ ಸಿಂಗಾರಿ ಮೇಳ, ವಾದ್ಯ ಘೋಷ, ಕುಣಿತ ಭಜನೆ, ಪೂರ್ಣಕುಂಭ ಸ್ವಾಗತಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ 9.30 ರ ಶುಭ ಲಗ್ನದಲ್ಲಿ ಪೂಜ್ಯ ತಂತ್ರಿಗಳು ಮತ್ತು ಪೂಜ್ಯ ಸ್ವಾಮೀಜಿಗಳವರ ಆಶೀರ್ವಾದದೊಂದಿಗೆ, ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಮುಂದಾಳು ಕೊಡುಗೈದಾನಿ ಕೆ.ಕೆ ಶೆಟ್ಟಿ ಮುಂಡಪ್ಪಳ್ಳ ನೂತನ ರಾಜಗೋಪುರದ ಭೂಮಿಗೆ ಹಾಲೆರೆಯುವ ಮೂಲಕ ಶಿಲಾನ್ಯಾಸವನ್ನು ನೆರವೇರಿಸಿದರು. ಈ ವೇಳೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿ, ಮಹಿಳಾ ಮಂಡಳಿ, ಯುವ ಬಳಗದ ಪ್ರಮುಖರು ಉಪಸ್ಥಿತರಿದ್ದರು. ಬೆಳಗ್ಗೆ ಕ್ಷೇತ್ರದ ಪ್ರಧಾನ ಅರ್ಚಕÀ ರವೀಶ್ ಭಟ್ ಕಾಸರಗೋಡು ಇವರಿಂದ ಭೂಮಿ ಪೂಜೆಯ ಕಾರ್ಯ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಕ್ಷೇತ್ರವು ಸುಮಾರು 1 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲ್ಲಿದ್ದು. ಮುಂದಿನ ವರ್ಷ ಬ್ರಹ್ಮಕಲಶೋತ್ಸವವು ನೆರವೇರಲಿದೆ.