HEALTH TIPS

ಒಳ, ಹೊರಗಿನ ಶಕ್ತಿಗಳಿಂದ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ: ಪ್ರಧಾನಿ ಮೋದಿ

 ಕತಾನಗರ : ಕೆಲವು ಬಾಹ್ಯ ಹಾಗೂ ಆಂತರಿಕ ಶಕ್ತಿಗಳು ದೇಶವನ್ನು ಅಸ್ಥಿತಗೊಳಿಸುವ ಪ್ರಯತ್ನ ಮಾಡುತ್ತಿವೆ. ವಿಶ್ವದಲ್ಲಿ ದೇಶದ ಬಗ್ಗೆ ಋಣಾತ್ಮಕ ಅಭಿಪ್ರಾಯ ಮೂಡುವಂತೆ ಮಾಡಲು ಅರಾಜಕತೆ ಸೃಷ್ಠಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾನಗರದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಸೇರಿದ್ದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.

'ಅಭಿವೃದ್ಧಿ ಹೊಂದಿದ ಭಾರತಕ್ಕೆ ವಿರುದ್ಧವಾಗಿ ಅವರು, ದೇಶವನ್ನು ಜಾತಿ ಆಧಾರದಲ್ಲಿ ಒಡೆಯುತ್ತಿದ್ದಾರೆ' ಎಂದು ಹೇಳಿದ ಅವರು, ದೇಶವನ್ನು ಒಡೆಯಲು ಯತ್ನಿಸುತ್ತಿರುವ ನಗರ ನಕ್ಸಲರ ಈ ಸಂಬಂಧವನ್ನು ಗುರುತಿಸಬೇಕು' ಎಂದು ನುಡಿದಿದ್ದಾರೆ.

ಕಾಡುಗಳಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ಆದರೆ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ. ಒಗ್ಗಟ್ಟಾಗಿರುವುದರಿಂದ ನಾವೆಲ್ಲಾ ಸುರಕ್ಷಿತವಾಗಿರುತ್ತೇವೆ ಎಂದು ಹೇಳುವವರನ್ನು ನಗರ ನಕ್ಸಲರು ಗುರಿಯಾಗಿಸುತ್ತಾರೆ. ಅವರ ಮುಖವಾಡವನ್ನು ಕಳಚಬೇಕು' ಎಂದು ಹೇಳಿದ್ದಾರೆ.

ಭಾರತದ ಏಕೀಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜನರಿದ್ದರೂ, ಸರ್ದಾರ್ ಪಟೇಲ್ ಅದನ್ನು ಸಾಧ್ಯವಾಗಿಸಿದ್ದರು ಎಂದ ಮೋದಿ, ಮುಂದಿನ ಎರಡು ವರ್ಷಗಳ ಕಾಲ ದೇಶವು ಪಟೇಲ್ ಅವರ 150 ನೇ ಜಯಂತಿಯನ್ನು ಆಚರಿಸಲಿದೆ ಎಂದರು.

ನಮ್ಮ ದೇಶವನ್ನು ಬಲಪಡಿಸುವ 'ಒಂದು ರಾಷ್ಟ್ರ, ಒಂದು ಜಾತ್ಯತೀತ ನಾಗರಿಕ ಸಂಹಿತೆ' ಅನುಷ್ಠಾನದತ್ತ ದೇಶ ಸಾಗುತ್ತಿದೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ 'ಒಂದು ರಾಷ್ಟ್ರ, ಒಂದು ಚುನಾವಣೆ' ಉಪಕ್ರಮವನ್ನು ಜಾರಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries