ಕೊಚ್ಚಿ: ಗಾಯಕಿ ಕೆ. ಎಸ್ ಚಿತ್ರಾ ಅವರ ಹೆಸರನ್ನು ಬಳಸಿಕೊಂಡು ಸೈಬರ್ ವಂಚನೆಗೆ ಯತ್ನಿಸಿದ ಘಟನೆ ನಡೆದಿದೆ. ಗಾಯಕಿಯ ಹೆಸರು ಮತ್ತು ಚಿತ್ರ ಬಳಸಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ದೋಚುವ ಯತ್ನ ನಡೆಯುತ್ತಿದೆ. ಹಲವರಿಗೆ ಹಣ ನೀಡುವಂತೆ ಸಂದೇಶಗಳು ಬಂದಿವೆ ಎಂದು ವರದಿಯಾಗಿದೆ.
'ನಾನು ಕೆಎಸ್ ಚಿತ್ರಾ, ಭಾರತೀಯ ಹಿನ್ನೆಲೆ ಗಾಯಕಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇನ್ವೆಸ್ಟ್‍ಮೆಂಟ್ ಕಂಪನಿಯ ರಾಯಭಾರಿ' – ಎಂಬ ವಾಯ್ಸ್ ಸಂದೇಶ ಹರಡುತ್ತಿದೆ. ಮೆಸೇಜ್ ಪಡೆದವರು ಚಿತ್ರಾ ಅವರೇ ಎಂದು ಕೇಳಿದಾಗ ಹೌದು ಎಂಬ ಉತ್ತರ ನೀಡಲಾಗಿದೆ. ರಿಲಯನ್ಸ್ ನಲ್ಲಿ 10,000 ರೂಪಾಯಿ ಹೂಡಿಕೆ ಮಾಡಿದರೆ, ಒಂದು ವಾರದ ನಂತರ ಅದು 50,000 ರೂಪಾಯಿಯಾಗಿ ಮರಳಿಸಲಾಗುತ್ತದೆ ಮತ್ತು ಹೂಡಿಕೆಯನ್ನು ಹೇಗೆ ಪ್ರಾರಂಭಿಸಬೇಕು ಎಂದು ತಿಳಿಸಲಾಗುವುದು ಎಂದು ಸಂದೇಶದಲ್ಲಿದೆ.
ಸೈಬರ್ ವಂಚನೆಯ ಬಗ್ಗೆ ಚಿತ್ರಾ ಅವರ ಆಪ್ತ ಮೂಲಗಳು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಕೆ.ಎಸ್.ಚಿತ್ರಾ ತಮ್ಮ ಹೆಸರಿನಲ್ಲಿರುವ ಎಲ್ಲಾ ಸಂದೇಶಗಳು ನಕಲಿಯಾಗಿದ್ದು, ಯಾರೂ ವಂಚನೆಗೆ ಬಲಿಯಾಗಬಾರದು ಎಂದು ಮನವಿ ಮಾಡಿರುವರು.