HEALTH TIPS

ಆಸ್ತಿಕರ ಸಹಯೋಗ ಮತ್ತು ಸಹಕಾರದಿಂದ ಬ್ರಹ್ಮಕಲಶೋತ್ಸವಗಳು ಯಶಸ್ವಿಯಾಗುತ್ತದೆ : ಪತ್ತಡ್ಕ ಗಣಪತಿ ಭಟ್

ಬದಿಯಡ್ಕ: ಬದುಕಿಗೊಂದು ನೆಮ್ಮದಿಯ ತಾಣವೆಂದರೆ ನಮ್ಮ ಪರಿಸರದ ದೇವಸ್ಥಾನಗಳು.ಅಂತಹ ಕೇಂದ್ರಗಳ ಸಾನ್ನಿಧ್ಯ ವೃದ್ಧಿಗೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಆಸ್ತಿಕ ಬಂಧುಗಳು ಸಹಕಾರ, ಸಹಭಾಗಿತ್ವ ಮತ್ತು ಸಹಯೋಗಗಳಿಂದ ಯಶಸ್ವಿಗೊಳಿಸಬೇಕು ಎಂದು ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಪತ್ತಡ್ಕ ಗಣಪತಿ ತೃತೀಯ ಅಕ್ಷತಾ ಮಹಾ ಅಭಿಯಾನವನ್ನು ದೀಪ ಜ್ವಾಲನೆಗೈದು ಉದ್ಘಾಟಿಸಿ ಕರೆಯಿತ್ತರು.

ಸಮಿತಿಯ ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರÀ ವೈ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿ ಮಹಾ ಅಭಿಯಾನಕ್ಕೆ ಚಾಲನೆ ಇತ್ತು ಅಭಿಯಾನದ 'ಕಿಟ್' ವಿತರಣೆ ಮಾಡಿದರು.


ದೇವಸ್ಥಾನಗಳು ಸಂಸ್ಕøತಿಯ ಕೇಂದ್ರಗಳು.ಮುಂದಿನ ಪೀಳಿಗೆಗೆ ಈ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಿ ನೀಡುವುದು ನಮ್ಮ ಕರ್ತವ್ಯ ಎಂದು ಅಭಿಯಾನದ ಮುಂಚೂಣಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಜಗದೀಶಚಂದ್ರ ಕುತ್ತಾಜೆ ಅಭಿಯಾನ ಸಂದೇಶ ನೀಡಿದರು.

ನಿವೃತ್ತ ಬ್ಯಾಂಕ್ ಉದ್ಯೋಗಿ ಗೋಪಾಲಕೃಷ್ಣ ನಾಯ್ಕ ಈಳಂತೋಡಿಯವರು ಅವರ ನಿವಾಸದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಮನವಿ ಪತ್ರವನ್ನು ಪ್ರಥಮವಾಗಿ ಸ್ವೀಕರಿಸಿದರು.

ಚಂದ್ರಶೇಖರ ಏತಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯಕರ್ತ ಸುಮಿತ್ ರಾಜ್ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries