HEALTH TIPS

ಕುಂಬ್ಡಾಜೆ ಗ್ರಾಮ ಕಚೇರಿಯಲ್ಲಿ ಉದ್ಯೋಗಸ್ಥರ ನೇಮಕಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬದಿಯಡ್ಕ: ಕುಂಬ್ಡಾಜೆ ಗ್ರಾಮಕಚೇರಿಯಲ್ಲಿ ಉದ್ಯೋಗಸ್ಥರನ್ನು ನೇಮಿಸದ ಸಂಬಂಧಪಟ್ಟ ಇಲಾಖೆಯ ಧೋರಣೆಯ ವಿರುದ್ಧ ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಮಾರ್ಪನಡ್ಕದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. 

ಬಿಜೆಪಿ ದೇಶೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಸ್ಮಾರ್ಟ್ ಗ್ರಾಮಕಚೇರಿಯನ್ನು ಸ್ಥಾಪಿಸಿ ಉದ್ಯೋಗಸ್ಥರನ್ನು ನೇಮಿಸದೆ ಸರ್ಕಾರ ಜನತೆಯನ್ನು ವಂಚಿಸಿದೆ. ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಇದೇ ರೀತಿಯ ಕಾರ್ಯಗಳನ್ನು ಮಾಡಿದ ಸಿಪಿಎಂ ಪಕ್ಷವು ಇಂದು ಅಸ್ತಿತ್ವದಲ್ಲಿಲ್ಲದಂತಾಗಿದೆ. ಕೇವಲ ಸ್ಮಾರ್ಟ್‍ಕಚೇರಿ ಜನತೆಗೆ ಏನನ್ನೂ ನೀಡುವುದಿಲ್ಲ. ಬದಲಾಗಿ ಅಲ್ಲಿ ಅಗತ್ಯ ಉದ್ಯೋಗಸ್ಥರು ಇರಬೇಕು. ಸರ್ಕಾರ ಜನತೆಗೆ ದ್ರೋಹ ಬಗೆದಿದೆ ಎಂದು ಅವರು ಆರೋಪಿಸಿದರು.

ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಕಚೇರಿಯಲ್ಲಿ ಕಳೆದ ಕೆಲವು ಸಮಯಗಳಿಂದ ಉದ್ಯೋಗಸ್ಥರಿಲ್ಲದೆ ಜನತೆಗೆ ತೀವ್ರ ಸಂಕಷ್ಟವುಂಟಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳು ಮಂಜೂರುಗೊಂಡ ಫಲಾನುಭವಿಗಳಿಗೆ ಅಗತ್ಯ ದಾಖಲೆಗಳಿಗೆ ಪರದಾಡುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಎಂ. ಸುಧಾಮ ಗೋಸಾಡ ಮಾತನಾಡಿ, ಗ್ರಾಮೀಣ ಪ್ರದೇಶದ ಕಚೇರಿಗಳಿಗೆ ಉದ್ಯೋಗಸ್ಥರ ನೇಮಕ ಮಾಡುವಲ್ಲಿಯೂ ಕಂದಾಯ ಇಲಾಖೆಯು ತಾರಮ್ಯ ನೀತಿಯನ್ನು ಅನುಸರಿಸುತ್ತಿದೆ. ಇತ್ತೀಚೆಗೆ ಸಿಪಿಐಎಂ ಪಕ್ಷವು ಕುಂಬ್ಡಾಜೆಯಲ್ಲಿ ನಡೆಸಿದ ಪ್ರತಿಭಟನೆ ಹಾಸ್ಯಾಸ್ಪದ ಎಂದು ಅವರು ಆರೋಪಿಸಿದರು. ಮಂಡಲ ಉಪಾಧ್ಯಕ್ಷ ಕೃಷ್ಣಶರ್ಮ ಜಿ., ನಳಿನಿ ಕೆ., ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಜಿಲ್ಲಾಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಮಹಿಳ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಯಶೋಧ ಎಂ., ಪಂಚಾಯಿತಿ ಸಮಿತಿ ಪ್ರಮುಖರು, ಜನಪ್ರತಿನಿಧಿಗಳು, ಬೂತ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ರೋಶಿನಿ ಪೊಡಿಪ್ಪಳ್ಳ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries