ಕಾಸರಗೋಡು: ನಗರದ ಬಿ.ಇ.ಎಂ ಶಾಲೆಯಲ್ಲಿ 2024 -25 ನೇ ಶೈಕ್ಷಣಿಕ ವರ್ಷದ ಶಾಲಾ ಕಲೋತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲ ರಾಜೇಶ್ ಚಂದ್ರ ಅವರು ವಹಿಸಿದ್ದರು. ಮುಖ್ಯ ಅತಿಥಿ ಶಶಿಧರ ಎದ್ರುತೋಡು ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಕಲೆಗಳಲ್ಲಿ ನಾಟಕ ಕಲೆಯ ಕುರಿತು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವಂತಹ ಮಾತುಗಳನ್ನಾಡಿದರು. ನಾಟಕಕಾರ ಹಾಗೂ ನಾಟಕ ತರಬೇತಿ ನೀಡುವ ಮುಖ್ಯ ಅತಿಥಿಯಾದ ಶಶಿಧರ ಎದ್ರುತೋಡು ಅವರ ಸಾಧನೆಗಳನ್ನು ಮನಗಂಡು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರೇಮ್ ಜಿತ್ ಹಾಗೂ ಮಾತೃ ಸಮಿತಿಯ ಅಧ್ಯಕ್ಷೆ ಉಷಾ ಕಿರಣ್, ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ಡಾ ಕೆ ಎನ್ ವೆಂಕಟರಮಣ ಹೊಳ್ಳ, ಶಾಲಾ ಪ್ರಾಂಶುಪಾಲ ರಾಜೇಶ್ ಚಂದ್ರ, ನೌಕರ ಸಂಘದ ಕಾರ್ಯದರ್ಶಿ ಯಶವಂತ ವೈ, ಉಪಸ್ಥಿತರಿದ್ದು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ಗಣೇಶ ಸ್ವಾಗತಿಸಿ,ಶಿಕ್ಷಕಿ ಶರ್ಲಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ಕೊನೆಗೆ ಕಲೋತ್ಸವ ಸಂಚಾಲಕಿ ರೋಹಿತಾಕ್ಷಿ ವಂದಿಸಿದರು.