ನವದೆಹಲಿ: 'ಸ್ವಚ್ಛ ಭಾರತ' ಅಭಿಯಾನಕ್ಕೆ 10 ವರ್ಷ ತುಂಬಿದ ಸಂದರ್ಭದಲ್ಲಿ ಈ ಅಭಿಯಾನದ ಮುಂದಿನ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 'ಮಿಷನ್ ಅಮೃತ' ಯೋಜನೆಯನ್ನು ಘೋಷಿಸಿದರು.
'ಮಿಷನ್ ಅಮೃತ' ಯೋಜನೆಯ ಮೂಲಕ ದೇಶದಾದ್ಯಂತ ಇರುವ ನಗರಗಳಲ್ಲಿನ ಕೊಳಚೆ ನೀರಿನ ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ.
'ದೇಶದ 60 ಸಾವಿರದಿಂದ 70 ಸಾವಿರ ಮಕ್ಕಳ ಜೀವವನ್ನು ಸ್ವಚ್ಛ ಭಾರತ ಯೋಜನೆಯು ಉಳಿಸಿದೆ ಎಂದು ಅಂತರರಾಷ್ಟ್ರೀಯ ವರದಿಯೊಂದು ಹೇಳಿದೆ. ಜೊತೆಗೆ, ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿರುವ ಕಾರಣ ಭಾರತದ ಶೇ 90ರಷ್ಟು ಮಹಿಳೆಯರು 'ತಾವು ಸುರಕ್ಷಿತ' ಎಂಬ ಭಾವನೆ ತಳೆದಿದ್ದಾರೆ ಎಂದು ಯುನಿಸೆಫ್‌ನ ವರದಿ ಹೇಳಿದೆ' ಎಂದು ಸ್ವಚ್ಛ ಭಾರತ ಯೋಜನೆಯನ್ನು ಪ್ರಧಾನಿ ಶ್ಲಾಘಿಸಿದರು.
'ದೇಶದಲ್ಲಿ ಸ್ವಚ್ಛತೆ ಮೂಡಿರುವುದರಿಂದ ಡಯೇರಿಯಾ ರೋಗದಿಂದ ಮೃತಪಡುತ್ತಿದ್ದವರ ಸಂಖ್ಯೆ ಇಳಿಕೆಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 2014ರಿಂದ 2019ರವರೆಗೆ ಸುಮಾರು 3 ಲಕ್ಷ ಜೀವಗಳು ಉಳಿದಿವೆ' ಎಂದು ಮೋದಿ ಹೇಳಿದರು.
'ಮಲಗುಂಡಿ ಸ್ವಚ್ಛತೆಯಿಂದಾಗಿ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಸ್ವಚ್ಛತೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಈ ತಂತ್ರಜ್ಞಾನ ಅಭಿವೃದ್ಧಿಗಾಗಿ ಸುಮಾರು 5 ಸಾವಿರ ಸ್ಟಾರ್ಟ್‌ಅಪ್ ಕಂಪನಿಗಳು ನೋಂದಾಯಿಸಿಕೊಂಡಿವೆ' ಎಂದರು.
'ನಮಾಮಿ ಗಂಗೆ' ಯೋಜನೆ ಅಡಿಯಲ್ಲಿ ಗಂಗಾ ನದಿ ತೀರದ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸ್ವಚ್ಛತೆ ಹಾಗೂ ತಾಜ್ಯ ನಿರ್ವಹಣೆಗಾಗಿ ₹1,500 ಕೋಟಿ ಹಾಗೂ 'ಗೋಬರ್‌ಧನ ಯೋಜನೆ' ಅಡಿಯಲ್ಲಿ 15 ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಘಟಕ ಸ್ಥಾಪನೆಗೆ ₹1,332 ಕೋಟಿ ಅನುದಾನ ನೀಡುವುದಾಗಿ ಇದೇ ಸಮಾರಂಭದಲ್ಲಿ ಪ್ರಧಾನಿ ಘೋಷಿಸಿದರು.
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದ ಪರಿವರ್ತಾ ಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕೆ ತೆರೆದ ವಿಷೇಶ ವಾಹನದಲ್ಲಿ ಆಗಮಿಸಿದ ಪ್ರಧಾನಿ ಮೋದಿ. ಜಾರ್ಖಂಡ್‌ನ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಂಡಿ ಅವರು ಜೊತೆಯಿದ್ದರು
ಗಾಂಧಿ ಜಯಂತಿ ಅಂಗವಾಗಿ ನವದೆಹಲಿಯ ಶಾಲೆಯೊಂದರಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿನಿಯರೊಂದಿಗೆ ಸ್ವಚ್ಛಾತ ಕಾರ್ಯ ನಡೆಸಿದರು
ನರೇಂದ್ರ ಮೋದಿ ಪ್ರಧಾನಿಸ್ವಚ್ಛತೆ ಕ್ಷೇತ್ರವು ದೇಶದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಅದು ಕಸದಿಂದ ರಸ ಮಾಡುವುದಿರಬಹುದು ತಾಜ್ಯದ ಸಂಗ್ರಹ ಅಥವಾ ಸಾಗಣೆ ಇರಬಹುದು ತಾಜ್ಯ ಮರುಬಳಕೆ ಇರಬಹುದು