ಮಂಜೇಶ್ವರ: ಕನ್ನಡ ಭಾಷೆ ,ಸಂಸ್ಕøತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ,ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ' ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದಂಗವಾಗಿ ಹಿರಿಯ ಕನ್ನಡ ಪೆÇೀಷಕ,ಸಮಾಜ ಸೇವಕ, ಕೊಡ್ಲಮೊಗರು ವಾಣಿವಿಜಯ ಪ್ರೌಢ ಶಾಲೆಯ ಪ್ರಬಂಧಕ ಅಡೆಕ್ಕಳ ಶಂಕರ್ ಮೋಹನ ಪೂಂಜ ಅವರನ್ನು ಕೊಡ್ಲಮೊಗರು ಅಡೆಕ್ಕಳದಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಕನ್ನಡ ಸಾಹಿತ್ಯಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಂಕರ್ ಮೋಹನಪೂಂಜ-ಕುಸುಮಾವಲಿ ಎಸ್.ಪೂಂಜ ದಂಪತಿಯನ್ನು ಡಾ. ಜಯಪ್ರಕಾಶ್ ನಾರಾಯಣ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು. ಸಾಹಿತಿ,ನಿವೃತ್ತ ಅಧ್ಯಾಪಕ ಎ.ಬಿ ರಾಧಾಕೃಷ್ಣ ಬಲ್ಲಾಳ್ ಅಭಿನಂದನಾ ಭಾಷಣ ಮಾಡಿ, ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಮಾಜಿಕ ರಂಗಕ್ಕೆ ಮೋಹನಪೂಂಜ ಸಲ್ಲಿಸಿದ ಸೇವೆ ಮಹತ್ತರವಾದುದು. ಕೊಡ್ಲಮೊಗರಿನಂತಹ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾಲಯ ಸಾವಿರಾರು ಕನ್ನಡ ಮಕ್ಕಳಿಗೆ ವಿದ್ಯಾದಾನದ ಮಾಡುವುದರ ಜತೆಗೆ ಸಾಹಿತ್ಯಪರಿಷತ್ತಿನ ಜಿಲ್ಲಾ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಶ್ರಯತಾಣವಾಗಿ ಸಹಕರಿಸಿರುವುದಾಗಿ ಹೇಳಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಉಪನ್ಯಾಸಕ ಶಿವಶಂಕರ.ಪಿ, ಗೋವಿಂದ ರಾಮ ಕಣಕ್ಕೂರು ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.