ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕರಿವೇಡಗಂ ಬಂಡಂಗೈ ಎಂಬಲ್ಲಿ ಮನೆಯೊಳಗೆ ಪಟಾಕಿ ಸಿಡಿದು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಲ್ಲಿನ ನಿವಾಸಿ ಮೋಹನದಾಸ್(46)ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗುರುವಾರ ರಾತ್ರಿ ಸ್ಪೋಟ ಸಂಭವಿಸಿದೆ. ಪ್ರಕರಣದ ಬಗ್ಗೆ ಪೊಲೀಸರು ಸ್ವಇಚ್ಛೆಯಿಂದ ಕೇಸು ದಾಖಲಿಸಿಕೊಂಡಿದ್ದಾರೆ.ಣೇಡಡ್ಕ ಠಾಣೆ ಇನ್ಸ್‍ಪೆಕ್ಟರ್ ರಂಜಿತ್‍ರವೀಂದ್ರನ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಸ್ಪೋಟದಿಂದ ಮನೆಯೊಳಗೆ ಪೀಠೋಪಕರಣಗಳಿಗೂ ಹಾನಿಯುಂಟಾಗಿದೆ.