ಕಾಸರಗೋಡು: ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ 2025 ಜನವರಿ 19ರಿಂದ 24 ರ ತನಕ ಜರಗಲಿರುವ ಪೆರುಂ ಕಳಿಯಾಟ ಮಹೋತ್ಸವದ ಯಶಸ್ಸಿಗಾಗಿ ಕಾಸರಗೋಡು ಪ್ರಾದೇಶಿಕ ಸಮಿತಿಯ ಕಾರ್ಯಾಲಯದ ಉದ್ಘಾಟನಾ ಸಮಾರಂಭ ಕಾಸರಗೋಡಿನಲ್ಲಿ ಜರುಗಿತು.
ಆದೂರು ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೂತನ ಕಾರ್ಯಾಲಯ ಉದ್ಘಾಟಿಸಿದರು. ಈ ಸಂದರ್ಭ ಕಳಿಯಾಟ ಮಹೋತ್ಸವ ಪ್ರಾದೇಶಿಕ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ರಕ್ಷಾಧಿಕಾರಿ ಡಾ. ಅನಂತ ಕಾಮತ್, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಡಪ್ಪುರ, ಕೋಶಾಧಿಕಾರಿ ಪುರುಷೋತ್ತಮ, ನಗರಸಭಾ ಸದಸ್ಯರಾದ ಸವಿತಾ ಟೀಚರ್, ಶ್ರೀಲತಾ ಟೀಚರ್, ಕೇಂದ್ರ ಸಮಿತಿಯ ಕಾರ್ಯದರ್ಶಿ ಅನಿಲ್ ಮಾಸ್ಟರ್, ಗುರುಪ್ರಸಾದ್ ಪ್ರಭು, ಅರುಣ್‍ಕುಮಾರ್ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ವಿವಿಧ ಆರಾಧನಾಲಯಗಳ ಪದಾಧಿಕಾರಿಗಳು, ಭಗವದ್ಭಕ್ತರು ಉಪಸ್ಥಿತರಿದ್ದರು.