ಕಾಸರಗೋಡು : ಜಿಲ್ಲೆಯ ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ವೈದ್ಯಕೀಯ ಕಾಲೇಜು ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಸಂಪೂರ್ಣ ರೀತಿಯಲ್ಲಿ ಜನರ ಸೇವೆಗೆ ಲಭ್ಯವಾಗಿಸುವುದರೊಂದಿಗೆ ಜಿಲ್ಲೆಯ ಜನತೆಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅಖಿಲ ಕೇರಳ ಫೊಟೋಗ್ರಾಫರ್ಸ್ ಅಸೊಸಿಯೇಶನ್(ಎಕೆಪಿಎ) ಕಾಸರಗೋಡು ಪ್ರಾದೇಶಿಕ ಸಮ್ಮೇಳನ ನಿರ್ಣಯದ ಮೂಲಕ ಕೋರಿದೆ.
ಸಂಘಟನೆ ಕಾಸರಗೋಡು ಪ್ರಾದೇಶಿಕ ಸಮ್ಮೇಳನ ಮುಳ್ಳೇರಿಯ ರೊಸೆಲ್ಲಾ ಸಭಾಂಗಣದಲ್ಲಿ ನಡೆಯಿತು. ಅಡೂರು ವೃತ್ತದಲ್ಲಿ ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಮ್ಮೇಳನವನ್ನು ಆದೂರು ಠಾಣೆ ಇನ್ಸ್‍ಪೆಕ್ಟರ್ ಸುನುಮೋನ್ ಉದ್ಘಾಟಿಸಿದರು. ಪ್ರಾದೇಶಿಕ ಸಮಿತಿ ಅಧ್ಯಕ್ಷ ವಾಸು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ಕೆ.ಸಿ.ಅಬ್ರಹಾಂ, ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯಾ, ಜಿಲ್ಲಾ ಕೋಶಾಧಿಕಾರಿ ಸುನೀಲಕುಮಾರ್ ಪಿ.ಟಿ., ಜಿಲ್ಲಾ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಉಸ್ತುವಾರಿ ವೇಣು ವಿ.ವಿ., ಜಿಲ್ಲಾ ಜಂಟಿ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್., ಜಿಲ್ಲಾ ನ್ಯಾಚುರಲ್ ಕ್ಲಬ್ ಸಂಯೋಜಕ ದಿನೇಶ್ ಇನ್‍ಸೈಟ್, ಜಿಲ್ಲಾ ಸ್ಪೋಟ್ರ್ಸ್ ಕ್ಲಬ್ ಸಂಯೋಜಕ ಸುಕು ಸ್ಮಾರ್ಟ್, ಜಿಲ್ಲಾ ಬ್ಲಡ್ ಡೋನರ್ಸ್ ಕ್ಲಬ್ ಸಂಯೋಜಕ ಸನ್ನಿ ಜೇಕಬ್, ಜಿಲ್ಲಾ ಸ್ಪೋಟ್ರ್ಸ್ ಕ್ಲಬ್ ಉಪ ಸಂಯೋಜಕ ರತೀಶ್ ಕೆ ಮತ್ತು ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಚಂದ್ರ ಬಿ.ಜೆ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ರೇಖಾ ಸ್ವಾಗತಿಸಿದರು. ಕೋಶಾಧಿಕಾರಿ ವಾಮನ್‍ಕುಮಾರ್ ವಂದಿಸಿದರು.
ಮಧ್ಯಾಹ್ನ ನಡೆದ ಪ್ರತಿನಿಧಿ ಸಭೆಯನ್ನು ಪ್ರಾದೇಶಿಕ ಸಮಿತಿ ಅಧ್ಯಕ್ಷ ವಾಸು ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಸಿ.ಅಬ್ರಹಾಂ ಉದ್ಘಾಟಿಸಿದರು. 2024-25 ನೇ ಸಾಲಿಗೆ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸನ್ನಿ ಜೇಕಬ್ ಅಧ್ಯಕ್ಷ , ಸರಿತಾ ಮುಳ್ಳೇರಿಯಾ ಉಪಾಧ್ಯಕ್ಷ, ವಾಮನ್ ಕುಮಾರ್ ಕಾರ್ಯದರ್ಶಿ, ಶ್ರೀಜಿಲ್ ಅಡೂರ್ ಜತೆ ಕಾರ್ಯದರ್ಶಿ, ಮನೋಜ್ ಕುಮಾರ್ ಕೋಶಾಧಿಕಾರಿ ಹಾಗೂ ಶ್ರೀಜಿತ್ ಕೆ ಅವರನ್ನು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.