ಲಾಸ್ ಏಂಜಲೀಸ್ : ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಅಭಿವೃದ್ಧಿಪಡಿಸಿರುವ ಚಾಲಕರಹಿತ ರೋಬೊ ಟ್ಯಾಕ್ಸಿಯನ್ನು ಅನಾವರಣ ಮಾಡಲಾಗಿದೆ.
ಲಾಸ್ ಏಂಜಲೀಸ್ : ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಅಭಿವೃದ್ಧಿಪಡಿಸಿರುವ ಚಾಲಕರಹಿತ ರೋಬೊ ಟ್ಯಾಕ್ಸಿಯನ್ನು ಅನಾವರಣ ಮಾಡಲಾಗಿದೆ.
ಹಾಲಿವುಡ್ ಸ್ಟುಡಿಯೊದಲ್ಲಿ ಟ್ಯಾಕ್ಸಿ ಅನಾವರಣದ ಬಳಿಕ ಮಾತನಾಡಿದ ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್, '2026ರಿಂದ ಕಂಪನಿಯು ರೋಬೊ ಟ್ಯಾಕ್ಸಿಗಳ ತಯಾರಿಕೆ ಆರಂಭಿಸಲಿದೆ.
ಮುಂದಿನ ವರ್ಷದ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‌ನಲ್ಲಿ ಕಂಪನಿಯ ಜನಪ್ರಿಯ ಕಾರುಗಳಾದ ಮಾಡೆಲ್ 3 ಮತ್ತು ಮಾಡೆಲ್ ವೈ ಅನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರೋಬೊ ಟ್ಯಾಕ್ಸಿಯ ಸ್ವಯಂಚಾಲಿತ ವ್ಯವಸ್ಥೆಗೆ 'ಆಟೊಪೈಲಟ್' ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಸಮೂಹ ಸಾರಿಗೆ ವ್ಯವಸ್ಥೆಯಾಗಿ ಜನಪ್ರಿಯಗೊಳಿಸುವುದು ಮಸ್ಕ್ ಅವರ ಗುರಿಯಾಗಿದೆ.