ತಿರುವನಂತಪುರಂ: ಮಹಾನವಮಿ ಹಿನ್ನೆಲೆಯಲ್ಲಿ ಇಂದು(ಶುಕ್ರವಾರ) ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಇಂದು ನಡೆಯಬೇಕಿದ್ದ ಪರೀಕ್ಷೆಗಳು, ಸಂದರ್ಶನಗಳು ಮತ್ತು ದೈಹಿಕ ಸಾಮಥ್ರ್ಯ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪಿಎಸ್‍ಸಿ ಪ್ರಕಟಿಸಿದೆ.
ಸೇವಾ ಪರಿಶೀಲನೆ ಮತ್ತು ದಾಖಲೆ ಪರಿಶೀಲನೆ ಕೂಡ ಬದಲಾಗಿದೆ. ಇವುಗಳ ಪರಿಷ್ಕøತ ದಿನಾಂಕವನ್ನು ನಂತರ ತಿಳಿಸಲಾಗುವುದು.
ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಮುಖ್ಯಮಂತ್ರಿಗಳು ಶುಕ್ರವಾರ ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಿದ್ದಾರೆ. ಇದೇ ವೇಳೆ ವಿಧಾನಸಭೆಗೆ ರಜೆ ಇರುವುದಿಲ್ಲ. ಶುಕ್ರವಾರ ವಿಧಾನಸಭೆ ಅಧಿವೇಶನ ನಡೆಯಲಿದೆ ಎಂದು ಅಧಿಕೃತ ಘೋಷಣೆಯಾಗಿದೆ.