HEALTH TIPS

ಮದರಸಾಗಳಲ್ಲಿ ಸಂಸ್ಕೃತ ಪಾಠ: ಚಿಂತನೆ

 ಡೆಹ್ರಾಡೂನ್‌: ಉತ್ತರಾಖಂಡದ 400 ಮದರಸಾಗಳಲ್ಲಿ ಮಕ್ಕಳಿಗೆ ಸಂಸ್ಕೃತ ಪಾಠ ಆರಂಭಿಸಲು ಅಲ್ಲಿನ ಮದರಸಾ ಮಂಡಳಿ ಉದ್ದೇಶಿಸಿದೆ. ಸಂಸ್ಕೃತ ಪಾಠವು ಐಚ್ಛಿಕವಾಗಿರಲಿದೆ' ಎಂದೂ ಅದು ಹೇಳಿದೆ.

'ಹಲವು ದಿನಗಳಿಂದ ಈ ಚಿಂತನೆ ನಡೆದಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಲು ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ.

ಆಧುನಿಕ ಶಿಕ್ಷಣ ಪದ್ಧತಿಯೊಂದಿಗೆ ಸರಿಸಮನಾಗಿ ಮದರಸಾಗಳಲ್ಲೂ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎನ್ನುವ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರ ಆಶಯದಂತೆ ಈ ಯೋಜನೆ ರೂಪಿಸಲಾಗಿದೆ' ಎಂದು ಮಂಡಳಿತ ಮುಖ್ಯಸ್ಥ ಮುಫ್ತಿ ಶಮೂನ್‌ ಖಾಸ್ಮಿ ಗುರುವಾರ ತಿಳಿಸಿದರು.

'ಎನ್‌ಸಿಇಆರ್‌ಟಿ ಪಠ್ಯವನ್ನು ಮದರಸಾಗಳಲ್ಲಿ ಪರಿಚಯಿಸಿದ ಬಳಿಕ, ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣವು ಶೇ 96ರಷ್ಟಾಗಿದೆ. ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎನ್ನುವುದನ್ನು ಈ ಪ್ರಮಾಣವು ಸಾಬೀತು ಮಾಡಿದೆ. ಈಗ ಸಂಸ್ಕೃತವನ್ನು ಕಲಿಸಿದರೆ ಕೂಡ ನಮ್ಮ ಮಕ್ಕಳು ಅದನ್ನು ಸರಿಯಾಗಿ ಕಲಿತುಕೊಳ್ಳುತ್ತಾರೆ' ಎಂದು ಅಭಿಪ್ರಾಯಪಟ್ಟರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries