ಮಂಜೇಶ್ವರ :ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತೂರು ಸಣ್ಣಡ್ಕ ನಿವಾಸಿ ಶೇಖರ(60)ಅವರ ಮೃತದೇಹ ಮಂಜೇಶ್ವರ ಕುಂಡುಕೊಳಕೆ ಸಮುದ್ರ ಕರಾವಳಿಯಲ್ಲಿ ಪತ್ತೆಯಾಗಿದೆ. ಕುಂಜತ್ತೂರು ಪೇಟೆಗೆ ತೆರಳಲು ಸೋಮವಾರ ಸಂಜೆ ಮನೆಯಿಂದ ಹೊರಟವರು ರಾತ್ರಿ ವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ಹುಡುಕಾಡುವ ಮಧ್ಯೆ ಮಂಗಳವಾರ ಮೃತದೇಹ ಪತ್ತೆಯಾಗಿದೆ.