HEALTH TIPS

ಪೆರಿಯಾ ನವೋದಯ ವಿದ್ಯಾಲಯದಲ್ಲಿ ಲ್ಯಾಟರಲ್ ಎಂಟ್ರಿ ಪ್ರವೇಶ

ಕಾಸರಗೋಡು: ಪೆರಿಯಾ ಜವಾಹರ್ ನವೋದಯ ವಿದ್ಯಾಲಯವು 2025-26ನೇ ಶೈಕ್ಷಣಿಕ ವರ್ಷಕ್ಕೆ 9 ಮತ್ತು 11ನೇ ತರಗತಿಗಳಲ್ಲಿ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಲ್ಯಾಟರಲ್  ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ. 

ಆನ್‍ಲೈನ್ ಅರ್ಜಿಯನ್ನು www.navodaya  ನಲ್ಲಿ ಅಕ್ಟೋಬರ್ 30 ರ ತನಕ ಸ್ವೀಕರಿಸಲಾಗುವುದು. ಆಸಕ್ತ ಅರ್ಜಿದಾರರು ಸರ್ಕಾರಿ ಮಾನ್ಯತೆ ಪಡೆದ ಶಾಲೆಯಿಂದ 2024 ರಲ್ಲಿ 8 ನೇ ತರಗತಿ ಯಾ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು 9 ನೇ ತರಗತಿಗೆ ಅರ್ಜಿ ಸಲ್ಲಿಸುವವರು  ಮೇ 1,2010 ಮತ್ತು 31 ಜುಲೈ 2012 ರ ನಡುವೆ ಜನಿಸಿದವರಾಗಿರಬೇಕು. 1 ಜೂನ್ 2008 ಮತ್ತು 31 ಜುಲೈ 2010 ರ ನಡುವೆ ಜನಿಸಿದವರು 11 ನೇ ತರಗತಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಳನ್ನು ವೆಬ್‍ಸೈಟ್‍ನಿಂದ ಪಡೆಯಬಹುದು.  ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2234057)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries