HEALTH TIPS

ಮಾತುಕತೆಯಿಂದಲೇ ಸಂಘರ್ಷ ಪರಿಹರಿಸಬೇಕು: ಜೈಶಂಕರ್

        ಜಾನ್ : ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಿಕೊಳ್ಳುವುದು ಈ ಹೊತ್ತಿನ ವಿಶೇಷ ಅಗತ್ಯ ಎಂದು ಗುರುವಾರ ಹೇಳಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿವಾದಗಳನ್ನು ಹಾಗೂ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದರು.

         ಹೆಚ್ಚು ನ್ಯಾಯಸಮ್ಮತವಾದ ಜಾಗತಿಕ ವ್ಯವಸ್ಥೆಯನ್ನು ರೂಪಿಸಲು ಐದು ಅಂಶಗಳನ್ನು ಪ್ರಸ್ತಾಪಿಸಿದ ಜೈಶಂಕರ್, ವಸಾಹತು ಕಾಲದಿಂದ ಉಳಿದುಕೊಂಡು ಬಂದಿರುವ ಜಾಗತಿಕ ಮೂಲಸೌಕರ್ಯದಲ್ಲಿನ ವಿರೂಪಗಳನ್ನು ಸರಿಪಡಿಸುವ ಕೆಲಸವನ್ನು ಭೌಗೋಳಿಕ ಸಮಗ್ರತೆಯನ್ನು ಗೌರವದಿಂದ ಕಾಣುತ್ತಲೇ ಮಾಡಬೇಕಿದೆ ಎಂದು ಹೇಳಿದರು.

            ಬ್ರಿಕ್ಸ್‌ ದೇಶಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಭಾಗಿಯಾದ ಜೈಶಂಕರ್ ಈ ಮಾತು ಹೇಳಿದರು. 'ಕಷ್ಟದ ಸಂದರ್ಭದಲ್ಲಿ ನಾವು ಇಲ್ಲಿ ಸೇರಿದ್ದೇವೆ. ಬಹುಕಾಲದಿಂದ ಉಳಿದಿರುವ ಸವಾಲುಗಳ ವಿಚಾರದಲ್ಲಿ ಜಗತ್ತು ಹೊಸದಾಗಿ ಆಲೋಚಿಸಬೇಕಿದೆ. ನಾವು ಇಲ್ಲಿ ಸೇರಿರುವುದು ಆ ಕೆಲಸ ಮಾಡಲು ನಾವು ನಿಜಕ್ಕೂ ಸಿದ್ಧರಿದ್ದೇವೆ ಎಂಬ ಸಂದೇಶವನ್ನು ನೀಡುತ್ತಿದೆ' ಎಂದರು.

              ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಬೇಕು, ಅದರಲ್ಲಿ ವಿನಾಯಿತಿ ಇರಬಾರದು. ಭಯೋತ್ಪಾದನೆಯ ವಿಚಾರದಲ್ಲಿ ಇನಿತೂ ಸಹನೆ ತೋರಬಾರದು ಎಂದು ಅವರು ಹೇಳಿದರು.

ಇಂಡೋನೇಷ್ಯಾ ಸಚಿವರ ಜತೆ ಮಾತುಕತೆ

            ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗಿಯಾಗಿರುವ ಎಸ್. ಜೈಶಂಕರ್‌ ಅವರು ಬುಧವಾರ ಇಂಡೋನೇಷ್ಯಾದ ವಿದೇಶಾಂಗ ಸಚಿವ ಸುಗಿಓನೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್‌ 'ಕಜಾನ್‌ನಲ್ಲಿ ಇಂದು ಇಂಡೋನೇಷ್ಯಾ ವಿದೇಶಾಂಗ ಸಚಿವ ಸುಗಿಒನೊ ಅವರನ್ನು ಭೇಟಿ ಮಾಡಿ ಸಂತೋಷವಾಯಿತು. ಉಭಯ ರಾಷ್ಟ್ರಗಳ ನಡುವಿನ ಸಮಗ್ರ ಪಾಲುದಾರಿಕೆಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಿದೆವು' ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries