ಕೊಚ್ಚಿ: ಆರ್‍ಎಸ್‍ಎಸ್‍ಗೆ ಮಾನಹಾನಿಯಾಗುವಂತೆ ವಿಧಾನಸಭೆಯಲ್ಲಿ ಮಾಡಿರುವ ಹೇಳಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಉತ್ತರ ಕೇರಳ ಜಿಲ್ಲಾ ಕಾರ್ಯವಾಹ ಪಿ.ಎನ್.ಈಶ್ವರ್ ತಿಳಿಸಿದ್ದಾರೆ.
ತೃಶೂರ್ ಪೂರಂ ಗದ್ದಲ ಸಂಬಂಧ ದೇವಸ್ವಂ ಸಚಿವರು, ಶಾಸಕರು ಸೇರಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿಧಾನಸಭೆಯ ಒಳಗೆ ಮತ್ತು ಹೊರಗೆ ಅವ್ಯವಸ್ಥೆಯ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ಹೇಳುತ್ತಿರುವುದು ಖಂಡನೀಯ. ಯಾವ ಪುರಾವೆಯ ಮೇಲೆ ಇಂತಹ ಸುಳ್ಳು ಆರೋಪ ಮಾಡಿದ್ದಾರೆ ಎಂದು ಈಶ್ವರ್ ಪ್ರಶ್ನಿಸಿದರು. ಈ ಕುರಿತು ರಾಜ್ಯಪಾಲರು ಮತ್ತು ಸ್ಪೀಕರ್ ಅವರನ್ನು ಭೇಟಿ ಮಾಡಲಾಗುವುದು ಎಂದಿರುವರು.
ಆರೆಸ್ಸೆಸ್ ಅನ್ನು ರಾಜಕೀಯ ವಿವಾದಗಳಿಗೆ ಎಳೆಯುವ ಕ್ರಮ ದುರುದ್ದೇಶಪೂರಿತವಾಗಿದೆ. ಪೂರಂ ವಿವಾದಗಳಲ್ಲಿ ಸಂಘದ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಸಚಿವರು, ಶಾಸಕರು ಮತ್ತು ವಿರೋಧ ಪಕ್ಷದ ನಾಯಕರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಲು ಪರಸ್ಪರ ವಾಗ್ದಾಳಿ ನಡೆಸುತ್ತಿರುವಾಗ ಸಂಘದ ಹೆಸರನ್ನು ಅನಗತ್ಯವಾಗಿ ಬಳಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ತ್ರಿಶೂರ್ ಪೂರಂ, ಶಬರಿಮಲೆ ಯಾತ್ರೆ ಸೇರಿದಂತೆ ಕೇರಳದ ಅನನ್ಯತೆ, ಸಂಸ್ಕøತಿಯನ್ನು ಗುರುತಿಸುವ ಎಲ್ಲ ಹಬ್ಬಗಳನ್ನು ಸಂಘರ್ಷ, ವಿವಾದಕ್ಕೆ ಸಿಲುಕಿಸುವ ಯೋಜಿತ ಚಟುವಟಿಕೆಗಳ ಮುಂದುವರಿಕೆಯೇ ಇಂತಹ ಆರೋಪಗಳು ಎಂದು ಪಿ.ಎನ್. ಈಶ್ವರ್ ಸೂಚಿಸಿದರು.