ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ರಾಜಾಂಗಣದಲ್ಲಿ ಡಿಸೆಂಬರ್ 16ರಿಂದ 19ರ ವರೆಗೆ ಜರಗಲಿರುವ ಕೋಟಿ ಪಂಚಾಕ್ಷರಿ ಜಪ ಯಜ್ಞದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.
ಪರಮಪೂಜ್ಯ ಜಗದ್ಗುರು ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಹಾಗೂ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ವೆಂಕಟ್ರಮಣ ಬಾಲಗೋಕುಲದ ವಿದ್ಯಾರ್ಥಿಘಳು ಪ್ರಾರ್ಥನೆ ಹಾಡಿದರು. ಸಮಾರಂಭದಲ್ಲಿ ಡಾ.ಅನಂತ ಕಾಮತ್ ಧ್ಯಕ್ಷತೆ ವಹಿಸಿದ್ದರು. ಹೋಟೆಲ್ ಉದ್ಯಮಿ ರಾಮ್ ಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ್ಷೇತ್ರದ ಕಾರ್ಯ ನಿರ್ವಾಹಣಾಧಿಕಾರಿ ಟಿ. ರಾಜೇಶ್, ಆಡಳಿತ ಸಮಿತಿ ಅಧ್ಯಕ್ಷ ವಕೀಲ ಗೋವಿಂದನ್ ನಾಯರ್, ಯಜ್ಞ ಸಮಿತಿ ಉಪಾಧ್ಯಕ್ಷೆ ಮೀರಾ ಕಾಮತ್ ಉಪಸ್ಥಿತರಿದ್ದರು.
ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಸ್ವಾಗತಿಸಿದರು. ದೇವದಾಸ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್ ವಂದಿಸಿದರು.