ಕಾಸರಗೋಡು : ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಿಇಎಂ ಹೈಯರ್ ಸೆಕೆಂಡರಿ ಶಾಲೆಯ ಮಕ್ಕಳು ಮತ್ತು ಮಲ್ಲಿಕಾರ್ಜುನ ದೇವಸ್ಥಾನ, ಎಇಒ ಕಚೇರಿ ಮತ್ತು ತಾಲೂಕು ಕಚೇರಿಗೆ ಪ್ರಯಾಣಿಸುವವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಸರಗೋಡು ಸರ್ಕಾರಿ ಶಾಲೆಯ ಮುಂಭಾಗದ ರಸ್ತೆಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಶಾಲಾ ರಕ್ಷಕ ಶಿಕ್ಷಕ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಯುಪಿ ಶಾಲೆಯಲ್ಲಿ ನಡೆದ ಪಿಟಿಎ ಮಹಾಸಭೆಯಲ್ಲಿ ಈ ಬಗ್ಗೆ ಠರಾವು ಮಂಡಿಸಲಾಯಿತು. ನಗರಸಭೆ ಸದಸ್ಯೆ ಎಂ.ಶ್ರೀಲತಾ ಸಭೆ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಶೀದ್ ಪೂರಣಂ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಕಾರ್ಯದರ್ಶಿ ಎ. ಶ್ರೀಕುಮಾರ್ ಮತ್ತು ಸುರೇಖಾ ಅವರು ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಎಸ್‍ಎಂಸಿ ಅಧ್ಯಕ್ಷ ಕೆ.ಸಿ.ಲೈಜುಮೋನ್, ಪಿಟಿಯುಎ ಉಪಾಧ್ಯಕ್ಷೆ ಕೆ.ಅಶ್ವತಿ, ಎಂಪಿಟಿಎ ಅಧ್ಯಕ್ಷೆ ಚೇತನಾ ಮುರಳಿ, ಎಸ್‍ಆರ್‍ಜಿ ಸಂಚಾಲಕ ಸರ್ವಮಂಗಳ ರಾವ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಡಿ.ವಿಮಲಾಕುಮಾರಿ ಸ್ವಾಗತಿಸಿದರು. ಹಿರಿಯ ಸಹಾಯಕ ಎ.ಪಿ.ಮೀನಾಕುಮಾರಿ ವಂದಿಸಿದರು.
ಈ ಸಂದರ್ಭ ಶಾಲಾ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಲ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರಶೀದ್ ಪೂರಣಂ ಅವರನ್ನು ಆಯ್ಕೆ ಮಾಡಲಾಯಿತು. ಪ್ರಣಬ್ ಆಳ್ವ, ಮಹೇಶ್ ಪಂಡಿತ್ ಉಪಾಧ್ಯಕ್ಷರು, ಕೆ ಸಿ ಲೈಜುಮೋನ್ ಎಸ್‍ಎಂಸಿ ಅಧ್ಯಕ್ಷ, ಕೆ ಮಾಲಿನಿ ಎಂಪಿಟಿಎ ಅಧ್ಯಕ್ಷೆ ಮತ್ತು ಕೆ ರಜನಿ ಅವರನ್ನು ಉಪಾಧಕ್ಷರಾಗಿಆಯ್ಕೆ ಮಾಡಲಾಯಿತು.