ಮಧೂರು : ಮಧೂರು ಸನಿಹದ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ವಷರ್ಂಪ್ರತಿ ನಡೆಯುವ ಕಾರ್ತಿಕ ದೀಪೆÇೀತ್ಸವ ನ. 2ರಂದು ಆರಂಭಗೊಂಡು ಡಿ. 2ರವರೆಗೆ ಜರುಗಲಿದೆ. ಕಾರ್ತಿಕ ದೀಪೆÇೀತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು. ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಕಾರಂತ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು.
ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ರಾತ್ರಿ ಭಜನಾ ಸಂಕೀರ್ತನ ಸೇವೆ ಹಾಗೂ ಅನ್ನಪ್ರಸಾದ ವಿತರಣಾ ಕಾರ್ಯದಲ್ಲಿ ಭಕ್ತಾದಿಗಳು ಸಹಕರಿಸುವಂತೆ ಕ್ಷೇತ್ರದ ಆಡಳಿತ ಸೇವಾ ಸಮಿತಿ ಅಧ್ಯಕ್ಷ ಶೀನ ಶೆಟ್ಟಿ ಕಜೆ, ಆಡಳಿತ ಸೇವಾ ಸಮಿತಿಯ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಮನವಿ ಮಾಡಿದರು.
ಆಮಂತ್ರಣ ಪತ್ರಿಕೆಯನ್ನು ಪ್ರತಿ ಮನೆಗಳಿಗೂ ವಿತರಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಯಿತು. ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಕೃಷ್ಣ ಹೊಳ್ಳ ನೀರಾಳ, ಕೋಶಾಧಿಕಾರಿ ಗಣೇಶ್ ಶೆಟ್ಟಿ ಹಳೆಮನೆ, ಕುಮಾರ್ ಕೆ ಎಲ್ ಪೆರಿಯಡ್ಕ, ಜೊತೆ ಕಾರ್ಯದರ್ಶಿ ಗಣೇಶ್ ಭಂಡಾರಿ ಮಾಯಿಪ್ಪಾಡಿ, ಸದಸ್ಯರಾದ ಅರವಿಂದ ಶೆಟ್ಟಿ, ಸುರೇಶ ಶೆಟ್ಟಿ ಮಾಯಿ ಪ್ಪಾಡಿ, ಉಮೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಉಡುವ, ಕಿಟ್ಟಣ್ಣ ಶೆಟ್ಟಿ ಬೇರ, ನಿತೀಶ್ ಆಳ್ವ ಪುಳ್ಕೂರು, ಸುಜಾತ ಶೆಟ್ಟಿ ಪುಳ್ಕೂರು, ವಾಣಿ ಶೆಟ್ಟಿ ಬೇರ, ಸುಜೇಶ್ ಶೆಟ್ಟಿ ನೀರಾಳ ಹಾಗೂ ಕಾರ್ಯಾಲಯದ ಸಹಾಯಕ ಚಂದ್ರಹಾಸ ಶೆಟ್ಟಿ ಪುಳ್ಕೂರು ಮೊದಲಾದವರು ಉಪಸ್ಥಿತರಿದ್ದರು.