ಕಾಸರಗೋಡು: ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಹಗ್ಗ ಜಗ್ಗಾಟ ಸ್ಪರ್ಧೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪೆರಿಯ ಕ್ಯಾಂಪಸ್‍ನಲ್ಲಿ ಜರುಗಿತು. ವಿಶ್ವ ವಇದ್ಯಾಳಯದ ಉಪಕುಲಪತಿ ಪೆÇ್ರ. ವಿನ್ಸೆಂಟ್ ಮ್ಯಾಥ್ಯೂ ಸ್ಪರ್ಧೆ ಉದ್ಘಾಟಿಸಿದರು.
ಸ್ವಚ್ಛತಾ ಹಿ ಸೇವಾ ನೋಡಲ್ ಅಧಿಕಾರಿ ಪೆÇ್ರ. ಮನು ಮತ್ತು ದೈಹಿಕ ಶಿಕ್ಷಣ ಸಲಹೆಗಾರ ಡಾ. ಚಂದ್ರಶೇಖರನ್ ಮೇಲತ್ ನೇತೃಥ್ವ ನೀಡಿದರು. ಪುರುಷರ ವಿಭಾಗದಲ್ಲಿ ಸಿಯುಕೆ ಬಾಯ್ಸ್ ಪ್ರಥಮ ಹಾಗೂ ಸೆಕ್ಯುರಿಟಿ ವಿಂಗ್ ದ್ವಿತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಶಿಕ್ಷಣ ವಿಭಾಗ ಪ್ರಥಮ ಸ್ಥಾನ ಪಡೆದರೆ, ಸಿಯುಕೆ ಗಲ್ರ್ಸ್ ತಂಡ ದ್ವಿತೀಯ ಸ್ಥಾನ ಪಡೆದರು.